ಪೊಲೀಸ್‌ ಪಡೆಗೆ ಸುವರ್ಣ ವರ್ಷ- ಮ್ಯಾರಥಾನ್

ಪೊಲೀಸ್‌ ಪಡೆಗೆ ಸುವರ್ಣ ವರ್ಷ- ಮ್ಯಾರಥಾನ್

ಮಾದಕ ಅರಿವಿಗಾಗಿ ಸಾರ್ವಜನಿಕರೊಂದಿಗೆ ಪೊಲೀಸ್ ಓಟ

ದಾವಣಗೆರೆ, ಮಾ. 10 – ಪೊಲೀಸ್ ಇಲಾಖೆ ಕುರಿತಂತೆ ಜನರಲ್ಲಿ ಅರಿವು ಹಾಗೂ ಕರ್ನಾ ಟಕಕ್ಕೆ ಪೊಲೀಸರು ನೀಡುತ್ತಿರುವ ಕೊಡುಗೆ ಬಗ್ಗೆ ತಿಳಿಸಲು ನಗರದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಮ್ಯಾರಥಾನ್ ಆಯೋಜಿಸಲಾಗಿತ್ತು.

ಕರ್ನಾಟಕ ಪೊಲೀಸ್ ಪಡೆ ಸುವರ್ಣ ವರ್ಷ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಡ್ರಗ್ಸ್ ಮತ್ತು ಮಾದಕ ದ್ರವ್ಯ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮ್ಯಾರಥಾನ್ ಆಯೋಜಿಸಲಾಗಿತ್ತು.

ಜಿಲ್ಲಾ ಕ್ರೀಡಾಂಗಣದಲ್ಲಿ ಪೂರ್ವವಲಯದ ಐಜಿಪಿ ಡಾ.ಕೆ. ತ್ಯಾಗರಾಜನ್ ಹಸಿರು ನಿಶಾನೆ ತೋರುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು.

5 ಕಿಮೀ ಹಾಗೂ 10 ಕಿ.ಮೀ ದೂರ ಕ್ರಮಿಸುವ ಓಟದಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. 

10ಕಿಮೀ ಓಟದ ಸ್ಪರ್ಧೆ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಡೆಂಟಲ್ ಕಾಲೇಜು ರಸ್ತೆ, ಗುಂಡಿ ಮಹದೇವಪ್ಪ ವೃತ್ತ, ಶಾಮನೂರು ರಸ್ತೆ, ಲಕ್ಷ್ಮೀ ಫ್ಲೋರ್ ಮಿಲ್ ಇನ್ನಿತರೆ ಮಾರ್ಗದ ಮೂಲಕವಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಮರಳಿತು.

5 ಕಿ.ಮೀ ಓಟದ ಸ್ಪರ್ಧೆಯು ಹದಡಿ ರಸ್ತೆಯ ಮುಖ್ಯ ಮಾರ್ಗ ವಾಗಿ ಕ್ರೀಡಾಂಗಣ ತಲುಪಿತು.

ಈ ಸಂದರ್ಭದಲ್ಲಿ ಮಾತ ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಉಮಾ ಪ್ರಶಾಂತ್, ಸಾರ್ವ ಜನಿಕರ ಸಹಭಾಗಿತ್ವ ದೊಂದಿಗೆ ಪೊಲೀಸ್ ಸಿಬ್ಬಂದಿಗೂ ರಾಜ್ಯವ್ಯಾಪಿ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ
ಎಲ್.ಹೆಚ್. ಅರುಣ ಕುಮಾರ್ ಮಾತನಾಡಿ, ಸಾರ್ವ ಜನಿಕ ಸ್ನೇಹಿ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು. ಎಎಸ್ಪಿಗಳಾದ ವಿಜಯ ಕುಮಾರ್ ಸಂತೋಷ್, ಜಿ.ಮಂಜುನಾಥ್, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮಮ್ಮೋಳಿ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡ್ರು, ಡಿಎಆರ್ ಡಿಎಸ್ಪಿ ನಿಷಿಮಪ್ಪ, ದಾವಣಗೆರೆ ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ಅಶೋಕ್‌ಪಾಳೇದ್, ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!