ಜಗಳೂರು: ಪ.ಪಂಚಾಯ್ತಿಯಲ್ಲಿ 1.41ಲಕ್ಷ ರೂ.ಗಳ ಉಳಿತಾಯ ಬಜೆಟ್

ಜಗಳೂರು: ಪ.ಪಂಚಾಯ್ತಿಯಲ್ಲಿ 1.41ಲಕ್ಷ ರೂ.ಗಳ ಉಳಿತಾಯ ಬಜೆಟ್

ಜಗಳೂರು, ಮಾ.8- ಪಟ್ಟಣ ಪಂಚಾ ಯತಿಯ 2024-25ನೇ ಸಾಲಿನ ಆಯವ್ಯಯ 20.31 ಕೋಟಿ ಅದಾಯ ನಿರೀಕ್ಷೆಯ ಮತ್ತು 1.41ಲಕ್ಷ ರೂ ಉಳಿತಾಯ ಬಜೆಟ್ಟನ್ನು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಚಂದ್ರಶೇಖರನಾಯ್ಕ್ ಮಂಡಿಸಿದರು.

ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ  ಆಯವ್ಯಯ ಮಂಡಿಸಿದ ಅವರು, ಕಳೆದ ಬಾರಿ 16 ಕೋಟಿ  ರೂ. ಆಯವ್ಯಯ ಮಂಡನೆಯಾಗಿದ್ದು, ಈ ಬಾರಿ 20.31 ಕೋಟಿ ರೂ.ಗಳ ಬಜೆಟ್ ಮಂಡನೆಯಾಗಿದೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತಡ ನೀಡಲಾಗುವುದು ಎಂದರು.

15ನೇ ಹಣಕಾಸು ಯೋಜನೆಯಡಿ 100 ಲಕ್ಷ ರೂಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ವಿದ್ಯುತ್ ದೀಪ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾ ಗುವುದು.

ಎಸ್‍ಎಫ್‍ಸಿ ವಿಶೇಷ ಅನುದಾನದಡಿ 150 ಲಕ್ಷ ರೂ.ಗಳನ್ನು ಕುಡಿಯುವ ನೀರಿನ ಸ್ಥಾವರ, ನೀರು ಪೂರೈಕೆಗೆ ಸಂಬಂಧಿಸಿದ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಎಸ್ಸಿ ಮತ್ತು ಎಸ್ಟಿ ಅನುದಾನದಡಿ 44 ಲಕ್ಷ ರೂ.ಗಳನ್ನು ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ರಾಜಕಾಲುವೆ, ರಸ್ತೆ, ಚರಂಡಿ, ವಿದ್ಯುತ್ ದೀಪ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.

error: Content is protected !!