ಸಂವಿಧಾನ ಇಲ್ಲದ ದೇಶ ಊಹಿಸಲೂ ಸಾಧ್ಯವಿಲ್ಲ : ನ್ಯಾ. ರಾಜೇಶ್ವರಿ

ಸಂವಿಧಾನ ಇಲ್ಲದ ದೇಶ ಊಹಿಸಲೂ ಸಾಧ್ಯವಿಲ್ಲ : ನ್ಯಾ. ರಾಜೇಶ್ವರಿ

ಸಂವಿಧಾನ ಜಾಗೃತಿ ರಥಯಾತ್ರೆಗೆ ನಗರದಲ್ಲಿ ಸ್ವಾಗತ 

ದಾವಣಗೆರೆ, ಮಾ.4- ಸಂವಿಧಾನದಿಂದ ಇಂದು ಪ್ರತಿಯೊಬ್ಬ ನಾಗರಿಕರೂ ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಇಂದು ಮಧ್ಯಾಹ್ನ ಆಗಮಿಸಿದ ಸಂವಿಧಾನ ಜಾಗೃತಿ ರಥಯಾತ್ರೆಗೆ ಸ್ವಾಗತ ಕೋರಿ ನಂತರ ಅವರು ಮಾತನಾಡಿದರು.

ಜನ ಜಾಗೃತಿ ರಥಯಾತ್ರೆ ಆಯೋಜಿಸಿರು ವುದು ಶ್ಲ್ಯಾಘನೀಯ. ಈ ರಥಯಾತ್ರೆ ಪ್ರತಿಯೊಂದು ಗ್ರಾಮಗ ಳಿಗೂ ಭೇಟಿ ನೀಡಿ ಅರಿವು ಮೂಡಿಸುತ್ತಿದೆ. ನಾವೆಲ್ಲಾ ಸಂ ವಿಧಾನದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.

ಜನ ಸಾಮಾನ್ಯರಿಗೆ ಸಂವಿಧಾನದ ಅರಿವು ಕಡಿಮೆ. ಆದ್ದರಿಂದ ಈ ಬಗ್ಗೆ ಜಾಗೃತಿ ಯೋಜನೆಯಡಿ ಜಾಗೃತಿ ಮೂಡಿಸಲಾಗುತ್ತಿದೆ. ಸಂವಿಧಾನ ಎಂದರೆ ಒಂದು ಪುಸ್ತಕ ಎಂದು ತಿಳಿದುಕೊಳ್ಳುತ್ತೇವೆ. ಈ ಪುಸ್ತಕ ಇಲ್ಲದೇ ಹೋಗಿದ್ದರೆ, ನಾವು ಹೇಗೆ ಆಡಳಿತ ಮಾಡುವುದು ಎಂಬುದೇ ಗೊತ್ತಾಗುತ್ತಿರಲಿಲ್ಲ ಹಾಗೂ ಎಲ್ಲಾ ಕಡೆ ಗಲಭೆ, ಗೊಂದಲಗಳು ಉಂಟಾಗುತ್ತಿದ್ದವು.ಸಂವಿಧಾನ ಇರುವ ಕಾರಣ ಇಂದು ಪ್ರಜಾಪ್ರಭುತ್ವ ಇದೆ.  ಜೊತೆಗೆ ನಾವೆಲ್ಲಾ ನಾಗರಿಕರಾಗಿ ಜೀವನ ನಡೆಸಲು ಅವಕಾಶ ದೊರೆತಿದೆ. ಸಂವಿಧಾನ ಇಲ್ಲದ ದೇಶವನ್ನು ಊಹೆ ಮಾಡಲು ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ,  ಬಸವಣ್ಣ ನವರು ಸಮಾನತೆ ಕನಸಿನೊಂದಿಗೆ ಸಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ಬುದ್ಧ ಹಾಗೂ ಬಸವಣ್ಣನವರ ಆಶಯಗಳು ಸಂವಿಧಾನದಲ್ಲಿ ಅಡಕವಾ ಗಿವೆ. ಈ ಆಶಯಗಳನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಹಿರಿಯ ವಕೀಲರಾದ ರಾಮಚಂದ್ರ ಕಲಾಲ್, ಬಿ.ಎಂ.ಹನುಮಂತಪ್ಪ ಮಾತನಾಡಿದರು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ವಿಜಯಾನಂದ್ ಸಂವಿಧಾನದ ಪೀಠಿಕೆ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ನ್ಯಾಯಾಧೀಶರಾದ ಶ್ರೀಪಾದ್ ಎನ್., ದಶರಥ್ ಬಿ., ಪ್ರವೀಣ್‌ಕುಮಾರ್ ಕೆ.ಆರ್., ಸಿವಿಲ್ ನ್ಯಾಯಾಧೀಶ ರಾದ ಎಸ್.ಜಿ.ಸಲಗೆರೆ, ನಿವೇದಿತಾ, ರೇಷ್ಮಾ,  ಹೆಚ್.ಡಿ. ಗಾಯತ್ರಿ, ಪ್ರಶಾಂತ್, ಮಲ್ಲಿಕಾರ್ಜುನ್, ಸಿದ್ದರಾಜು, ನಾಜಿಯಾ ಕೌಸರ್, ಜಿಲ್ಲಾ ನ್ಯಾಯಾಂಗದ ಆಡಳಿತಾಧಿಕಾರಿ ಬಿ.ಶ್ರೀನಿವಾಸ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್‌ ನಾಯಕ್,  ಸಂಘದ ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!