ಮೈಲಾರ; ಮೈ ನವಿರೇಳಿಸಿದ ಸರಪಳಿ ಪವಾಡ

ಮೈಲಾರ; ಮೈ ನವಿರೇಳಿಸಿದ ಸರಪಳಿ ಪವಾಡ

ಹೂವಿನ ಹಡಗಲಿ, ಫೆ. 27 – ಸುಪ್ರಸಿದ್ಧ ಶ್ರೀ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಕಂಚಾವೀರರ ಪವಾಡ ಇಂದು ಸಂಜೆ ದೇವಸ್ಥಾನದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. 

ಪ್ರತಿ ವರ್ಷದ ಪದ್ಧತಿ, ಸಂಪ್ರದಾಯದಂತೆ ಕಂಚಾವೀರರು ತಮ್ಮ ವಿವಿಧ ಪವಾಡಗಳನ್ನು ಬಯಲು ಗೊಳಿಸಿದರು. ಸರಪಳಿ ಪವಾಡ, ಬಗಣಿಗೂಟದ ಪವಾಡ, ಶಸ್ತ್ರ ಪವಾಡ, ನೋಡುಗರ ಮೈ ನವಿರೇಳಿಸಿದವು. ಕಂಚಾವೀರರ ಆರ್ಭಟಕ್ಕೆ ಭಕ್ತ ವೀಕ್ಷಕರು ನಿಬ್ಬೆರಗಾದರು. 

ಬಗಣೆಗೂಟದ ಪವಾಡವನ್ನು ಅರುಣ್ ಕುಮಾರ್, ಕೈ ಪವಾಡವನ್ನು ಬಸವಂತಪ್ಪ, ಸರಪಳಿ ಪವಾಡವನ್ನು ಅನಿಲ್ ಮೊದಲಾದವರು ನೆರವೇರಿಸಿದರು. 

ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಬಿ.ಎಮ್. ಕೃಷ್ಣಪ್ಪ ಸೇರಿದಂತೆ ಸಿಬ್ಬಂದಿ ವರ್ಗ, ಸರ್ಕಲ್ ಇನ್ಸ್‌ ಪೆಕ್ಟರ್‌  ದೀಪಕ್ ಬೂಸ್ ರೆಡ್ಡಿ, ಪಿ.ಎಸ್.ಐ. ಭರತ್ ಪ್ರಕಾಶ್ ಸಿಬ್ಬಂದಿ ಸೂಕ್ತ ಬಂದೋಬಸ್ತ್‌ ಸೇರ್ಪಡಿಸಿದ್ದರು. 

error: Content is protected !!