ದಾವಣಗೆರೆ, ಫೆ.26- ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅವರು ಸೋಮವಾರ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಭದ್ರಾ ಬಲದಂಡೆ ಕಾಲುವೆ ಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಪರಿಶೀಲಿಸಿ ರೈತರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಭದ್ರಾ ಅಚ್ಚುಕಟ್ಟು ಪ್ರದೇಶವಾದ ಬಾಡ, ಶಂಕರನಹಳ್ಳಿ, ಅಣಬೇರು, ಸೋಮನಹಳ್ಳಿ, ಗೆದ್ದಲಹಟ್ಟಿ, ನಲ್ಕುಂದ, ತ್ಯಾವಣಗಿ ಪ್ರದೇಶಗಳಿಗೆ ಭೇಟಿ ನೀಡಿ ಅನಧಿಕೃತವಾಗಿ ಅಳವಡಿಸಿಕೊಂಡಿದ್ದ ಪಂಪ್ ಸೆಟ್ ತೆರವು ಪರಿಶೀಲನೆ ನಡೆಸಿದರು.
ಭದ್ರಾ ನಾಲೆ ಹರಿಯುವಿಕೆ ಪ್ರಮಾಣ ವೀಕ್ಷಿಸಿದ ಜಿಲ್ಲಾಧಿಕಾರಿ ವೆಂಕಟೇಶ್
