ತುಂಗಭದ್ರಾ ನದಿಗೆ ಬಾರದ ನೀರು ದ್ಯಾಮವ್ವನ ಜಾತ್ರೆಯಲ್ಲಿ ಭಕ್ತರ ಪರದಾಟ

ತುಂಗಭದ್ರಾ ನದಿಗೆ ಬಾರದ ನೀರು ದ್ಯಾಮವ್ವನ ಜಾತ್ರೆಯಲ್ಲಿ ಭಕ್ತರ ಪರದಾಟ

ಹೂವಿನಹಡಗಲಿ, ಫೆ.21- ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಮೈಲಾರ ಜಾತ್ರೆಯ ಅಂಗವಾಗಿ ಈಗಾಗಲೇ ಬಿಡುಗಡೆ ಮಾಡಲಾಗಿರುವ ನೀರು ಇನ್ನೂ ಮೈಲಾರ ಸೇತುವೆ ತಲುಪಿಲ್ಲ. 

ಹಾವನೂರು ದ್ಯಾಮವ್ವನ ಜಾತ್ರೆಗೆ ಬಂದಿದ್ದ ಭಕ್ತರು ನದಿಯಲ್ಲಿ ನೀರಿಲ್ಲದ ಕಾರಣ ಪರದಾಡಬೇಕಾಯಿತು. 

ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಲು ಗಂಗೆಯ ಪೂಜೆಗೆ  ತೆರಳುವ ಭಕ್ತರಿಗೆ  ನಿರಾಸೆ ಉಂಟಾಗಿ, ಅಕ್ಕಪಕ್ಕದ ಹೊಲಗಳಲ್ಲಿರುವ ಕೊಳವೆ ಬಾವಿಗಳನ್ನು ಆಶ್ರಯಿಸಿದರು.

ವಿಜಯನಗರ ಜಿಲ್ಲಾಡಳಿತದ ಮನವಿ ಮೇರೆಗೆ ಸರ್ಕಾರ ಭದ್ರಾ ಜಲಾಶಯದಿಂದ ಈಗಾಗಲೇ ನೀರು ಬಿಡುಗಡೆಗೊಳಿಸಿದೆ. ಮೈಲಾರ ಜಾತ್ರೆಯ ಕಾರ್ಯ ಚಟುವಟಿಕೆಗಳು ಆರಂಭಗೊಂಡಿದ್ದು, ಇಂದಿನಿಂದ  ಇದೇ ದಿನಾಂಕ 26ರವರೆಗೆ ಭಕ್ತರು ಮೈಲಾರದಲ್ಲಿ ಬೀಡು ಬಿಟ್ಟಿರುತ್ತಾರೆ. ಆದರೆ, ನದಿಯಲ್ಲಿ ನೀರಿಲ್ಲ ಎಂಬ ಕಾರಣಕ್ಕೆ ತಮ್ಮ ತಮ್ಮ ವಾಹನಗಳಲ್ಲಿ ಟ್ಯಾಂಕ್‌ ಗಳನ್ನು ತುಂಬಿಕೊಂಡು ಬರುವ ಸ್ಥಿತಿ ಎದುರಾಗಿದೆ. 

ಈ ವೇಳೆಗಾಗಲೇ ಭದ್ರಾ ಜಲಾಶಯದಿಂದ ನೀರು ಮೈಲಾರವನ್ನು ತಲುಪಬೇಕಿತ್ತು. ಆದರೆ, ನದಿಯ ಒಡಲಲ್ಲಿ ಮರಳು ಸಾಗಾಟಗಾರರು ಗುಂಡಿ ಗಳನ್ನು ತೋಡಿ ಮರಳನ್ನ ಎತ್ತಿರುವುದರಿಂದ ಆ ಗುಂಡಿಗಳಲ್ಲಿ ನೀರು ಸಂಗ್ರಹವಾದ ನಂತರ ಮುಂದೆ ನೀರು ಚಲಿಸ ಬೇಕಾಗಿದೆ.

error: Content is protected !!