ದಾವಣಗೆರೆ, ಫೆ. 19- ಇಲ್ಲಿನ ವಿದ್ಯಾನಗರದ ಶಿವ-ಪಾರ್ವತಿ ದೇವಸ್ಥಾನದ ಆವರಣದಲ್ಲಿ ಸಂಚಾರಿ ಆರೋಗ್ಯ ವಾಹನದಲ್ಲಿ ಆಯೋಜಿಸ ಲಾಗಿದ್ದ ಆರೋಗ್ಯ ಶಿಬಿರದಲ್ಲಿ ಸುಮಾರು 200 ಜನರಿಗೆ ಜ.ಜ.ಮು. ವೈದ್ಯಕೀಯ ವಿದ್ಯಾಲಯದ ನುರಿತ ವೈದ್ಯರಿಂದ ಸಂಪೂರ್ಣ ಆರೋಗ್ಯ ತಪಾಸಣೆ ಹಾಗೂ ಸಮಾಲೋಚನೆ ನಡೆಸಲಾಯಿತು.
ರಕ್ತದ ಸಕ್ಕರೆ ತಪಾಸಣೆ, ಬಿ.ಪಿ ತಪಾಸಣೆ, ಇ.ಸಿ.ಜಿ ಪರೀಕ್ಷೆ, ನೇತ್ರ ತಪಾಸಣೆ, ಹೃದಯ ತಪಾಸಣೆ ಹಾಗು ನುರಿತ ವೈದ್ಯರಿಂದ ಸಂಪೂರ್ಣ ಆರೋಗ್ಯ ತಪಾಸಣೆ, ಉಚಿತ ಔಷಧಿಯೊಂದಿಗೆ 24 ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಉಚಿತ ಎಸ್ಎಸ್ ಕೇರ್ ಟ್ರಸ್ಟ್ ಕಾರ್ಡ್ ವಿತರಿಸಲಾಯಿತು. 6 ಜನರಿಗೆ ಬಾಪೂಜಿಯ ಮೋದಿ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಕಾರ್ಡ್ ನೀಡಲಾಯಿತು.
ಎಸ್.ಎಸ್. ಕೇರ್ ಟ್ರಸ್ಟ್‌ನ ಟ್ರಸ್ಟಿಗಳಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿ, ನಾಗರಿಕರು ಬಿ.ಪಿ. ಮತ್ತು ಸಕ್ಕರೆ ಕಾಯಿಲೆ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಹಾಗೂ ಉತ್ತಮ ಆರೋಗ್ಯ ಶೈಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.