`ಜನತಾ ಸೇವೆ’ ಮಾಡುವವರು ರಾಜಕೀಯಕ್ಕೆ ಬರಬೇಕು

`ಜನತಾ ಸೇವೆ’ ಮಾಡುವವರು ರಾಜಕೀಯಕ್ಕೆ ಬರಬೇಕು

ವಿಶ್ರಾಂತ ಲೋಕಾಯುಕ್ತ ಸಂತೋಷ್ ಹೆಗಡೆ ಕಿವಿಮಾತು

ದಾವಣಗೆರೆ, ಫೆ. 19- ವೈಯಕ್ತಿಕ ಲಾಭದ ಆಸೆಯನ್ನು ಕೈಬಿಟ್ಟು, ಜನತಾ ಸೇವೆಗೆ ಕಂಕಣ ತೊಟ್ಟು ಬರುವವರು ಮಾತ್ರ ರಾಜಕೀಯ ಪ್ರವೇಶ ಮಾಡಿ ಎಂದು ವಿಶ್ರಾಂತ ಲೋಕಾಯುಕ್ತ ಸಂತೋಷ್ ಹೆಗಡೆ ಕಿವಿಮಾತು ಹೇಳಿದರು.

ನಗರದ ಶಿವಯೋಗಾಶ್ರಮದ ಆವರಣದಲ್ಲಿ `ಜಿಲ್ಲೆ ಸಮಾಚಾರ’ ಬಳಗದ ವತಿಯಿಂದ ಹಮ್ಮಿಕೊಂಡಿದ್ದ `ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕೇವಲ ವೈಯಕ್ತಿಕ ಲಾಭ, ಅಧಿಕಾರದ ಆಸೆ, ಹಣ ಮಾಡುವ ದುರಾಸೆ ಇರುವವರು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಬಾರದು. ಜನಪರ ಕಾಳಜಿಯುಳ್ಳವರು, ನಿಸ್ವಾರ್ಥ ಸೇವೆ ಸಲ್ಲಿಸುವವರು ಮಾತ್ರ ರಾಜಕೀ ಯಕ್ಕೆ ಬಂದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದರು.

ಸಮಾಜದಲ್ಲಿ ಶ್ರೀಮಂತರು ಮಾತ್ರ ಹುದ್ದೆಯನ್ನು ಖರೀದಿಸುತ್ತಾರೆ. ಹಣ ಕೊಟ್ಟು ಅಧಿಕಾರಕ್ಕೆ ಬಂದವರಿಂದ ಪ್ರಾಮಾ ಣಿಕ, ನಿಸ್ವಾರ್ಥ ಸೇವೆ ನಿರೀಕ್ಷಿ ಸಲು ಅಸಾಧ್ಯ. ಅಂತವರು ಕೇವಲ ಹಣ ಮಾಡುವ ದುರಾಸೆಯಿಂದ ಅಧಿಕಾರಕ್ಕೆ ಬರುತ್ತಾರೆ. ಯಾವುದೇ ಸಮಾಜ ಸೇವೆಯನ್ನು ಮಾಡಲು ಆಗುವುದಿಲ್ಲ ಎಂದು ಹೇಳಿದರು. 

ದುರಾಸೆಯನ್ನು ತ್ಯಜಿಸಿ, ತೃಪ್ತಿ ಎಂಬ ಮೌಲ್ಯವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸತ್ಯ ಶುದ್ಧವಾಗಿರುವುದೇ ಕಾಯಕ. ಅಂತಹ ಕಾಯಕವನ್ನು ಸಂತೋಷ್ ಹೆಗಡೆ ಮಾಡುತ್ತಾ ಬಂದಿದ್ದಾರೆ. ಅಳಿಯುವುದು ಕಾಯ, ಉಳಿಯುವುದು ಸತ್ಕಾರ್ಯ. ವ್ಯಕ್ತಿಗೆ ಸಾವಿದೆ. ಆದರೆ ಅವನು ಮಾಡುವ ವ್ಯಕ್ತಿತ್ವಕ್ಕೆ ಸಾವಿಲ್ಲ. ಅವರು ಮಾಡಿರುವ ಸೇವೆ ಮೂಲಕ ಚಿರಂಜೀವಿಗಳಾಗಿದ್ದಾರೆ ಎಂದರು.

ಇವತ್ತು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರವುದನ್ನು ನೋಡಿದರೆ, ತಮಗೆ ತುಂಬಾ ನೋವಾಗುತ್ತದೆ. ವಿದ್ಯಾವಂತರೇ ವೈದ್ಯರು, ಇಂಜಿನಿಯರ್, ಉನ್ನತ ಹುದ್ದೆ ಗಳಲ್ಲಿ ಇರುವವರೇ ತಮ್ಮ ತಂದೆ-ತಾಯಿ ಗಳನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಾರೆ. ಮಾನವೀಯತೆಯಿಂದ ಮೃಗತ್ವದ ಕಡೆ ಸಮಾಜ ಹೋಗುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ `ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಭಾಜನರಾದ ತಪೋವನ ಸಮೂಹ ಸಂಸ್ಥೆಗಳ ಛೇರ್ಮನ್ ಡಾ.ವಿ.ಎಂ.  ಶಶಿಕುಮಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಹಿರಿಯ ವಕೀಲ ರಾಮಚಂದ್ರ ಕಲಾಲ್ ಮಾತನಾಡಿದರು.

ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಹರಿಶಂಕರ್ ಆಶಯ ನುಡಿಗಳನ್ನಾ ಡಿದರು. ಜಿಲ್ಲೆ ಸಮಾಚಾರ ಪತ್ರಿಕಾ ಬಳಗದ ಸಂಸ್ಥಾಪಕ ವಿ. ಹನುಮಂತಪ್ಪ, ಸಂಪಾದಕ ವೆಂಕಟೇಶ್, ಉಪ ಸಂಪಾದಕರಾದ ಭಾರತಿ, ಮಹಾಂತೇಶ್ ವಿ. ಒಣರೊಟ್ಟಿ ಮತ್ತಿತರರು ಭಾಗವಹಿಸಿ ದ್ದರು. ನೇತ್ರಾವತಿ ಸಾಯಿ ಪ್ರಕಾಶ್ ಪ್ರಾರ್ಥಿಸಿದರು. ಸಾಲಿಗ್ರಾಮ ಗಣೇಶ ಶೆಣೈ ನಿರೂಪಿಸಿದರು. ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಅಧ್ಯಕ್ಷರಾದ ಸತ್ಯಭಾಮ ಮಂಜುನಾಥ್ ಸ್ವಾಗತಿಸಿದರು.

error: Content is protected !!