ಸ್ವಚ್ಛತೆ ಕಾಪಾಡುವವರ ಶ್ರೇಯೋಭಿವೃದ್ಧಿ ಆಗಬೇಕು

ಸ್ವಚ್ಛತೆ ಕಾಪಾಡುವವರ ಶ್ರೇಯೋಭಿವೃದ್ಧಿ ಆಗಬೇಕು

ಸಫಾಯಿ ಕರ್ಮಚಾರಿಗಳ ಸೌಲಭ್ಯಗಳ ಕುರಿತ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ ವೆಂಕಟೇಶ್ ಆಶಯ  

ದಾವಣಗೆರೆ, ಫೆ. 18-   ಸ್ವಚ್ಚತೆ ಕಾಪಾಡು ವಲ್ಲಿ ಸಫಾಯಿ ಕರ್ಮಚಾರಿಗಳ ಶ್ರಮದ ಬೆವರಿದೆ. ಹಾಗಾಗಿ  ಅವರ ಶ್ರೇಯೋಭಿವೃದ್ಧಿ ಆಗಬೇಕು. ಅದಕ್ಕಾಗಿ ಸರ್ಕಾರ ವಿವಿಧ ಯೋಜ ನೆಗಳನ್ನು ಜಾರಿಗೆ ತಂದಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು. 

ನಗರದ ಜಿಲ್ಲಾಡಳಿತ ಭವನದಲ್ಲಿನ ತುಂಗಭದ್ರಾ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ದಿ ನಿಗಮ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ ಹಾಗೂ ಮಹಾನಗರ ಪಾಲಿಕೆ ಇವರ ಸಹಯೋಗದಲ್ಲಿ ಸಫಾಯಿ ಕರ್ಮಚಾರಿಗಳಿಗೆ ಇರುವ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಸೈನಿಕರು ಹೊರಗಿನ ಶತ್ರುಗಳಿಂದ ದೇಶ ರಕ್ಷಣೆ ಮಾಡುವರು. ಅದೇ ರೀತಿ ದೇಶದೊಳಗಿನ ಅನೈರ್ಮಲ್ಯತೆಯನ್ನು ಹೋಗಲಾಡಿಸುವ ಕೆಲಸವನ್ನು ಸಫಾಯಿ ಕರ್ಮಚಾರಿಗಳು ಮಾಡುತ್ತಾರೆ.  ಇಂತಹ ಕಾರ್ಮಿಕರಿಗೆ ಸರ್ಕಾರದಿಂದ ರೂಪಿಸಿರುವ ಯೋಜನೆಗಳನ್ನು ತಲುಪಿಸುವ ಮೂಲಕ ಇವರ ಶ್ರೇಯೋಭಿವೃದ್ದಿ ಮಾಡಬೇಕಾಗಿದೆ ಎಂದರು. 

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಮೂಲಕ ಯೋಜನೆಗಳ ಸದುಪಯೋಗ ಮಾಡಿಕೊಳ್ಳಲು ಏರ್ಪಡಿಸಲಾಗಿರುವ ಈ ಕಾರ್ಯಾಗಾರ ಅತ್ಯುತ್ತಮವಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಕಿವಿಮಾತು ಹೇಳಿದರು. 

ಸಫಾಯಿ ಕರ್ಮಚಾರಿಗಳಿಗೆ ರಾಜ್ಯ ಸಫಾಯಿ  ಕರ್ಮಚಾರಿ ಅಭಿವೃದ್ದಿ ನಿಗಮದಿಂದ ಸ್ವಯಂ ಉದ್ಯೋಗ ಯೋಜನೆಯಡಿ ಒಂದು ಲಕ್ಷದವರೆಗೆ ಶೇ. 50 ಸಹಾಯಧನದಡಿ ನೇರ ಸಾಲ, ಉದ್ಯಮ ಶೀಲತಾ ಯೋಜನೆಯಡಿ ರೂ.2 ಲಕ್ಷದವರೆಗೆ ಸಹಾಯಧನದಡಿ ಬ್ಯಾಂಕಿನ ಮೂಲಕ ಸಾಲ, ಸರಕು ಸಾಗಾಣಿಕೆ ವಾಹನ ಖರೀದಿಗೆ ರೂ.3.50 ಲಕ್ಷ ಸಹಾಯಧನದಡಿ ಬ್ಯಾಂಕಿನ ಮೂಲಕ ಸಾಲ, ಮೈಕ್ರೋ ಕ್ರೆಡಿಟ್ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಚಟುವಟಿಕೆಗಳಿಗಾಗಿ ಪ್ರತಿ ಸದಸ್ಯರಿಗೆ ರೂ.25 ಸಾವಿರದವರೆಗೆ, ಇದರಲ್ಲಿ ರೂ.15 ಸಾವಿರ ಸಹಾಯಧನ ಹಾಗೂ ರೂ.10 ಸಾವಿರ ಬೀಜಧನವಾಗಿ ನೀಡಲಾಗುತ್ತದೆ. 

ಭೂ ಒಡೆತನ ಯೋಜನೆಯಡಿ ವಾಸಸ್ಥಳದಿಂದ 10 ಕಿ.ಮಿ.ಒಳಗೆ 2 ಎಕರೆ ಖುಷ್ಕಿ ಅಥವಾ 1 ಎಕರೆ ನೀರಾವರಿ ಭೂಮಿ ನೀಡುವ ಯೋಜನೆ ಇದಾಗಿದೆ. ಪೌರ ಕಾರ್ಮಿಕ, ಸಫಾಯಿ ಕರ್ಮಚಾರಿ ಮಕ್ಕಳಿಗೆ ಶಿಶುಪಾಲನಾ ಕೇಂದ್ರ ಸ್ಥಾಪನೆಯಡಿ ಪೌರ ಕಾರ್ಮಿಕರು ಕೆಲಸಕ್ಕೆ ತೆರಳುವುದರಿಂದ ಅವರ 6 ತಿಂಗಳ ಮಕ್ಕಳಿಂದ 6 ವರ್ಷದವರೆಗೆ ಮಕ್ಕಳ ಲಾಲನೆ, ಪಾಲನೆ ಮಾಡಲು 50 ಮಕ್ಕಳಿಗೆ ಒಂದು ಘಟಕವಾಗಿ ಶಿಶುಪಾಲನಾ ಘಟಕ ತೆರೆಯಲಾಗು ತ್ತದೆ. ಅರಿವು ಜಾಗೃತಿ, ಕೌಶಲ್ಯಾಭಿವೃದ್ದಿ ತರಬೇತಿ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಯೋಜನೆಗಳ ವಿವರ ನೀಡಿದರು. 

ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಅಭಿವೃದ್ದಿ ನಿಗಮದ ಬಸವರಾಜ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ದಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೃಷ್ಣಕುಮಾರ್ ಭಾಗವತ್  ಇನ್ನಿತರರು ಉಪಸ್ಥಿತರಿದ್ದರು. 

error: Content is protected !!