ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಕಲೆಗಳಲ್ಲೂ ತೊಡಗಿಸಿಕೊಳ್ಳಬೇಕು

ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಕಲೆಗಳಲ್ಲೂ ತೊಡಗಿಸಿಕೊಳ್ಳಬೇಕು

`ಚೈತನ್ಯ ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮದಲ್ಲಿ ಡಾ.ಪಿ.ಎಸ್. ಸುರೇಶ್ ಬಾಬು ಸಲಹೆ

ದಾವಣಗೆರೆ, ಫೆ. 13- ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ಬೇಕೆಂದು ಹಿರಿಯ ವೈದ್ಯರು ಮತ್ತು ಮಕ್ಕಳ ತಜ್ಞರಾದ ಡಾ. ಪಿ.ಎಸ್. ಸುರೇಶ್ ಬಾಬು ಸಲಹೆ ನೀಡಿದರು. 

ಅಶ್ವತ್ಥ ಪುರ ದೇಶಸ್ತ ಬ್ರಾಹ್ಮಣ ಸಮಾಜದಿಂದ ಶ್ರೀ ಶಂಕರ ಸಮುದಾಯ ಭವನದಲ್ಲಿ  ನಡೆದ 11 ನೇ ವರ್ಷದ `ಚೈತನ್ಯ ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.

ಕೆಲವು  ಪೋಷಕರು ಸಣ್ಣ ಮಕ್ಕಳಿಗೆ  ಆಡಲು ಮೊಬೈಲ್ ಕೊಡುವ ಮೂಲಕ ಮೊಬೈಲ್ ನಿಂದ  ಮಕ್ಕಳಿಗೆ ಬೇರೆ ಬೇರೆ ರೀತಿಯಲ್ಲಿ ಆರೋಗ್ಯ ಪರಿಣಾಮ ಬೀರಬಹುದು ಎಂದು ಸಭೆಯಲ್ಲಿ ನೆರೆದಿದ್ದ ಪೋಷಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಾವಣ ಗೆರೆಯ ಹಿರಿಯ ವೈದ್ಯರಾದ ಡಾ. ಶ್ರೀಪಾದ್ ಭಟ್ ಮಾತನಾಡಿ, ಸಮಾಜದ ನಡೆಸುವ ಈ ತರಹದ ಕಾರ್ಯಕ್ರಮಗಳು ಮಕ್ಕಳಿಗೆ ಉತ್ತೇಜನ  ನೀಡುತ್ತವೆ. ಅವರ ಪ್ರತಿಭೆಗಳನ್ನು ತೋರಿಸಲು ಸೂಕ್ತ ವೇದಿಕೆ ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಅಶ್ವತ್ಥ್ ಪುರ ಶ್ರೀರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ್ ಒಂಟಿಮಾರ ಅವರು  ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಳೆದ 11 ವರ್ಷಗಳಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಬರುತ್ತಿದ್ದು, ಈ ಕಾರ್ಯಕ್ರಮಕ್ಕೆ ತಾವು ನೀಡುತ್ತಿರುವ ಸಹಕಾರ, ಪ್ರೋತ್ಸಾಹ, ಮುಖ್ಯ ಕಾರಣ ಎಂದು ತಿಳಿಸಿದರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಇತರದ ಕಾರ್ಯಕ್ರಮಗಳನ್ನು ನಡೆಸಿ, ಸಮಾಜದ ಸದಸ್ಯರಿಗೆ ವಿವಿಧ ತರದಲ್ಲಿ ಸಹಾಯ ಮಾಡಲು ಅನುಕೂಲವಾಗುತ್ತದೆ, ಎಂದು ಹೇಳಿ, ಪ್ರಭು ಶ್ರೀರಾಮಚಂದ್ರನ ಕೃಪೆ ಸಂಸ್ಥೆಯ ಮೇಲೆ  ಇದೆ  ಎಂದು ಈ ಸಂದರ್ಭದಲ್ಲಿ ಹಾರೈಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬ್ರಾಹ್ಮಣ ಸೇವಾ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ ಸತ್ಯನಾರಾಯಣ ರಾವ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಸಮಾಜ ಬಾಂಧವರಿಗೆ ನಡೆಸಿದ ಆನ್‌ಲೈನ್‌ ರಸಪ್ರಶ್ನೆ ಕಾರ್ಯಕ್ರಮದ ಬಹುಮಾನ ವಿತರಣೆಯನ್ನು ವಿಜೇತರಿಗೆ ನೀಡಲಾಯಿತು.

ಸಂಸ್ಥೆಯು `ಆರೋಗ್ಯ ನಿಧಿ’ ಎಂಬ ಯೋಜನೆಯನ್ನು ಬಿಡುಗಡೆಗೊಳಿಸಿದ್ದು,  ಆರೋಗ್ಯ ನಿಧಿಗೆ ಧನ ಸಹಾಯ ಮಾಡಿದ ಎಲ್ಲರಿಗೂ ಈ ಸಂದರ್ಭದಲ್ಲಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ವಿಜೇಷ್ ಕೊಲ್ಲೂರ್ ಮತ್ತು ವಸಂತ ಕೊಪ್ಲು ಸ್ವಾಗತಿಸಿದರು. ಸಹ ಕಾರ್ಯದರ್ಶಿ ಅನಿಲ್ ಬಾರೆಂಗಳ್ ನಿರೂಪಿಸಿದರು.

error: Content is protected !!