ಕೇಂದ್ರ ಯೋಜನೆ ಫಲಾನುಭವಿಗಳ ಸೆಲ್ಫಿ

ಕೇಂದ್ರ ಯೋಜನೆ ಫಲಾನುಭವಿಗಳ ಸೆಲ್ಫಿ

ದಾವಣಗೆರೆ, ಫೆ.12- ಪಾಂಡಿಚೇರಿ‌ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಮಾಮಾಲಿನಿ ನಗರದ ಬಿಜೆಪಿ ಜಿಲ್ಲಾ ಕಚೇರಿಗೆ ಸೋಮವಾರ ಭೇಟಿ ನೀಡಿದ್ದರು.

ಅಖಿಲ ಭಾರತೀಯ ಸಂಘಟನಾತ್ಮಕ ಪ್ರವಾಸದ ಅಂಗವಾಗಿ ಆಗಮಿಸಿದ್ದ ಅವರು, `ಕೇಂದ್ರ ಸರ್ಕಾರದ ಯೋಜನೆಗಳ ಮಹಿಳಾ ಫಲಾನುಭವಿಗಳ ಸೆಲ್ಫಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಲಾನುಭವಿಗಳೊಂದಿಗೆ ಮಾನಾಡಿದರು.

ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಬಿಜೆಪಿ ಕಾರ್ಯಕರ್ತೆಯರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾ ರದ ಯೋಜನೆಗಳಿಂದಾದ ಪ್ರಯೋಜನಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,  ಮಹಿಳೆಯರು ಕೇಂದ್ರ ಸರ್ಕಾರದ ಯೋಜನೆ ಗಳಿಂದಾದ ಪ್ರಯೋಜನದ ಬಗ್ಗೆ ಎಲ್ಲರಿಗೂ ತಿಳಿಸಬೇಕು  ಎಂದು ಕರೆ ನೀಡಿದರು.

ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸ್ತ್ರೀ ಸಮುದಾಯಕ್ಕೆ ಶಕ್ತಿ ತುಂಬಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಚಾಲಕಿ ಜಯಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಭಾಗ್ಯ ಪಿಸಾಳೆ, ಪುಷ್ಪಾ ವಾಲಿ ಸೇರಿದಂತೆ ಹಲವು ಕಾರ್ಯಕರ್ತೆಯರು ಭಾಗವಹಿಸಿದ್ದರು.

ಪ್ರವಾಸದ ಭಾಗವಾಗಿ ಹೇಮಾಮಾಲಿನಿ ಅವರು ಆನೆಕೊಂಡ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಭೇಟಿ, ಶೈಕ್ಷಣಿಕ ಸಂಸ್ಥೆಗಳ ಯುವ ಮತದಾರರೊಂದಿಗೆ ಸಂವಾದ, ಬೂತ್‌ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದರು.

error: Content is protected !!