ದಾವಣಗೆರೆ, ಫೆ.13- ಗಾಂಧಿ ನಗರದಲ್ಲಿರುವ ಹೊರಟ್ಟಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಮುಂಭಾಗದಲ್ಲಿ ಇಂದು ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಂದರ ಗಂಬಕ್ಕೆ ಪೂಜೆ ಸಲ್ಲಿಸಿದರು.
ಮಾರ್ಚ್ 19 ಮತ್ತು 20 ರಂದು ನಗರದೇವತೆ ಶ್ರೀ ದುರ್ಗಾಂಬಿಕಾದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಗಾಂಧಿನಗರದ ಶ್ರೀ ದುರ್ಗಾಂಬಿಕಾ ದೇವಿ , ಚೌಡೇಶ್ವರಿ ದೇವಿ ಮತ್ತು ಹುಲುಗಮ್ಮ ದೇವಿ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜಾ ಕಾರ್ಯಗಳು ಮೂಲ ದೇವಸ್ಥಾನದಂತೆೇಯೇ ಜರುಗುತ್ತವೆ.
ಈ ಸಂದರ್ಭದಲ್ಲಿ ಹೊರಟ್ಟಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಅಧ್ಯಕ್ಷ ಎಲ್.ಎಂ.ಹನುಮಂತಪ್ಪ, ಗೌರವ ಅಧ್ಯಕ್ಷ ಎನ್.ನೀಲಗಿರಿ ಯಪ್ಪ, ಕಾರ್ಯಾಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ, ಕಾರ್ಯದರ್ಶಿ ಬಿ.ಎಂ.ಈಶ್ವರ್, ಖಜಾಂಚಿ ಬಿ.ಎಂ.ರಾಮಸ್ವಾಮಿ, ಎಲ್.ಡಿ.ಗೋಣಪ್ಪ, ಪೂಜಾರ್ ಹನುಮಂತಪ್ಪ, ಡಿ.ಗಂಗಾಧರಪ್ಪ, ಹುಚ್ಚೆಂಗಪ್ಪ, ಪಾಲಿಕೆ ಸದಸ್ಯ ಜಿ.ಡಿ. ಪ್ರಕಾಶ್, ವಾಸುದೇವ, ಚಂದ್ರಪ್ಪ, ಎಲ್.ಎಚ್.ಸಾಗರ್, ಶಿವಮೂರ್ತಿ, ಪರಶುರಾಮ್, ಮಂಜುನಾಥ್, ವೆಂಕಟೇಶ್, ಬೆಳ್ಳೂಡಿ ಹನುಮಂತಪ್ಪ ಹಾಗೂ ಸಮರ್ಥ ಶಾಮನೂರು, ದಿನೇಶ್ ಕೆ.ಶೆಟ್ಟಿ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.