ವಿಶ್ವ ಕ್ಯಾನ್ಸರ್‌ ದಿನಾಚರಣೆ : ಗಮನ ಸೆಳೆದ ಕ್ಯಾನ್ಸರ್‌ ಜಾಗೃತಿ ನಡಿಗೆ

ವಿಶ್ವ ಕ್ಯಾನ್ಸರ್‌ ದಿನಾಚರಣೆ : ಗಮನ ಸೆಳೆದ ಕ್ಯಾನ್ಸರ್‌ ಜಾಗೃತಿ ನಡಿಗೆ

ದಾವಣಗೆರೆ, ಫೆ.6-  ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ  ಜಿ.ಎಂ. ಫಾರ್ಮಸಿ ಕಾಲೇಜು  ಜಿ.ಎಂ. ವಿಶ್ವವಿದ್ಯಾಲಯದ ನೇತೃತ್ವದಲ್ಲಿ  ನಗರದಲ್ಲಿ ಕ್ಯಾನ್ಸರ್ ಜಾಗೃತಿಗಾಗಿ ವಾಕಥಾನ್ ಆಯೋಜಿಸಲಾಗಿತ್ತು. 

ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ವೇಲೆನ್ಸ್ ಇಲಾಖೆ, ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ, ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಸಹಕಾರದೊಂದಿಗೆ ಈ ಜಾಗೃತಿ ನಡಿಗೆ ಯಶಸ್ವಿಯಾಗಿ ನಡೆಯಿತು. ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಿಂದ ಆರಂಭವಾದ ನಡಿಗೆಯಲ್ಲಿ ಜಿಎಂ ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳು, ಎನ್.ಎಸ್. ಎಸ್ ಸ್ವಯಂಸೇವಕರು, ಆಸಕ್ತ ನಾಗರಿಕರು, ಗಣ್ಯರು ಹೆಜ್ಜೆ ಹಾಕಿದರು. 

ಬೋಲೋ ಭಾರತ್ ಮಾತಾ ಕಿ ಜೈ, ಕ್ಯಾನ್ಸರ್ ಸೆಲ್ ಕಿತ್ತಾಕಿ, ಜಾಗೃತಿಯ ಶಕ್ತಿ – ಕ್ಯಾನ್ಸರ್ ನಿಂದ ಮುಕ್ತಿ ಮೊದಲಾದ ಘೋಷಣೆಗಳೊಂದಿಗೆ ಸಾಗಿದ ಜಾಗೃತಿ ನಡಿಗೆ ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತದ ಮೂಲಕ ಜಯದೇವ ವೃತ್ತ ತಲುಪಿತು. ಅಲ್ಲಿ ವಿದ್ಯಾರ್ಥಿಗಳಿಂದ ಮಾನವ ಸರಪಳಿ ರಚಿಸಲಾಯಿತು. 

ಈ ನಡಿಗೆಗೆ ಚಾಲನೆ ನೀಡಿದ ಜಿ.ಎಂ. ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ.ಲಿಂಗರಾಜು ಕ್ಯಾನ್ಸರ್ ಬಗ್ಗೆ ಭಯಬೇಡ, ಸೂಕ್ತ ಚಿಕಿತ್ಸೆ ಇದೆ. ಆ ಕುರಿತು ನಾವೆಲ್ಲ  ಜಾಗೃತಿ ಮೂಡಿಸಬೇಕಿದೆ ಎಂದು ಕರೆ ನೀಡಿದರು.  ವಿಶ್ವಾರಾಧ್ಯ ಆಸ್ಪತ್ರೆಯ ಕ್ಯಾನ್ಸರ್ ತಜ್ಞೆ ಡಾ.ಭಾರತಿ ಕ್ಯಾನ್ಸರ್ ರೋಗಲಕ್ಷಣಗಳು ಹಾಗೂ ಉಪಚಾರದ ವಿಧಾನಗಳನ್ನು ವಿವರಿಸಿದರು. ಈಗ ಒಂದು ಲಕ್ಷ ಜನರಲ್ಲಿ 94 ಮಂದಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಒತ್ತಡದ ಜೀವನ ಶೈಲಿ, ತಂಬಾಕು ಮುಂತಾದ ದುಶ್ಚಟಗಳೂ ಕಾರಣ. ಇಂತಹುಗಳಿಂದ ದೂರವಾಗಿ, ಜೀವನ ಶೈಲಿಯನ್ನು ಮಾರ್ಪಾಡು ಮಾಡದಿದ್ದರೆ, ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ ಎಂದು ಡಾ.ಮಹಾಂತೇಶ್ ಎಚ್ಚರಿಕೆ ನೀಡಿದರು. 

ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಕಾರ್ಯದರ್ಶಿ ಸುಕ್ಷೇಮ ಆಸ್ಪತ್ರೆಯ ಡಾ.ಸುನೀಲ್ ಬ್ಯಾಡಗಿ ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆಗೆ ಆಧುನಿಕ ವೈದ್ಯಕೀಯ ವ್ಯವಸ್ಥೆ ಸಹಕಾರಿಯಾಗುತ್ತಿದೆ. ಆದ್ದರಿಂದ ರೋಗಿಗಳು ನಿರ್ಭೀತಿಯಿಂದ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು. ಕ್ಯಾನ್ಸರ್ ಫೌಂಡೇಶನ್ ರಾಯಭಾರಿ ಆರ್.ಟಿ. ಅರುಣ್‌ ಕುಮಾರ್ ಕ್ಯಾನ್ಸರ್ ರೋಗ ಕಾಣಿಸಿಕೊಂಡಾಗ ಹೆದರದೆ, ಧೈರ್ಯದಿಂದ ಎದುರಿಸಿ ಎಂದು ತಾವು ಹನ್ನೆರಡು ವರ್ಷಗಳ ಹಿಂದೆ ಕ್ಯಾನ್ಸರ್ ಜಯಿಸಿದ್ದನ್ನು ಹೇಳಿ ಉತ್ಸಾಹ ಮೂಡಿಸಿದರು.

 ಹರಿಹರದ ಶಾಸಕ ಬಿ.ಪಿ. ಹರೀಶ್, ಪಾಲಿಕೆ ಸದಸ್ಯ ಪ್ರಸನ್ನಕುಮಾರ್, ಡಿ.ಎಚ್‌.ಓ ಡಾ. ಷಣ್ಮುಖಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್, ಜಿಎಂ ಟ್ರಸ್ಟಿ ಜಿ.ಎಸ್. ಅನಿತ್‌ಕುಮಾರ್, ಕುಲಪತಿ ಡಾ. ಎಸ್.ಆರ್. ಶಂಖಪಾಲ್, ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ವಿವಿ ರಿಜಿಸ್ಟ್ರಾರ್ ಡಾ.ಸುನಿಲ್, ಡೀನ್ ಡಾ. ಜಿ.ಎಂ.ಪಾಟೀಲ್, ಶಾಸಕ ಬಿ.ಪಿ. ಹರೀಶ್, ಜಿ.ಎಂ. ಫಾರ್ಮಸಿ ಕಾಲೇಜಿನ ಪ್ರಾಚಾರ್ಯ.ಎಂ.ಎಚ್‌. ಡಾ.ಗಿರೀಶ್ ಬೋಳಕಟ್ಟಿ, ಜಿ.ಎಂ.ಎಸ್. ಪದವಿ ಕಾಲೇಜಿನ ಶ್ವೇತಾ ಮರಿಗೌಡ್ರು, ಪ.ಪೂ ಕಾಲೇಜಿನ ಡಾ. ಓಂಕಾರಪ್ಪ, ಜಿ.ಎಂ. ಸಮೂಹದ ಆಡಳಿತಾಧಿಕಾರಿ ವೈ.ಯು.ಸುಭಾಷ್, ಕಾಲೇಜಿನ ತರಬೇತಿ ಮತ್ತು ನಿಯೋಜನೆ ಅಧಿಕಾರಿ ತೇಜಸ್ವಿ ಕಟ್ಟಿಮನಿ  ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್‌, ರೋಟರಿ ಸಂಸ್ಥೆಯ ಸುನೀತಾ ಮೃತ್ಯುಂಜಯ, ಚೂಡಾಮಣಿ ಇತರರಿದ್ದರು.

ಕೊನೆಯಲ್ಲಿ ವಿದ್ಯಾರ್ಥಿಗಳು ಕ್ಯಾನ್ಸರ್ ಜಾಗೃತಿ ಕುರಿತು ಕಿರು ನಾಟಕಗಳನ್ನು ಅಭಿನಯಿಸಿ, ಗಮನ ಸೆಳೆದರು.

error: Content is protected !!