ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮೌಲ್ಯಯುತ ಸಮಾಜ ನಿರ್ಮಾಣ : ಪುರಸಭೆ ಮುಖ್ಯಾಧಿಕಾರಿ ಸುರೇಶ್

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮೌಲ್ಯಯುತ ಸಮಾಜ ನಿರ್ಮಾಣ : ಪುರಸಭೆ ಮುಖ್ಯಾಧಿಕಾರಿ ಸುರೇಶ್

ಮಲೇಬೆನ್ನೂರು, ಜ. 8 – ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸು ತ್ತಿದ್ದಾರೆ ಎಂದು ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. 

ಶನಿವಾರ ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ವೀರಭದ್ರೇ ಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಲೇಬೆನ್ನೂರು ವಲಯ ಮಟ್ಟದ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಧರ್ಮಸ್ಥಳ ಯೋಜನೆ ನಂಬಿಕೆಯ ಪ್ರತಿ ರೂಪವಾಗಿದ್ದು, ಜನರ ಏಳಿಗೆಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮದ್ಯವರ್ಜನೆ ಶಿಬಿರವು ಸಮಾಜದಲ್ಲಿ ಬದಲಾವಣೆಗೆ ಶ್ರಮಿಸುತ್ತಿದೆ. ಇಂತಹ ಒಳ್ಳೆಯ ಯೋಜನೆಗಳ ಸದುಪಯೋಗ ಪಡೆದು ಕೊಂಡು ಜನರು ಪ್ರಗತಿ ಸಾಧಿಸಬೇಕೆಂದು ಸುರೇಶ್ ಮನವಿ ಮಾಡಿದರು. 

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿ ಡಾ. ಲಕ್ಷ್ಮಿದೇವಿ ಮಾತನಾಡಿ, ಧರ್ಮ ಸ್ಥಳ ಯೋಜನೆ ಹೆಣ್ಣುಮಕ್ಕಳಿಗೆ ಶಕ್ತಿ ಆಗಿದ್ದು, ಮಹಿಳೆಯರು ಸಾಕಷ್ಟು ಬದಲಾವಣೆ ಆಗುತ್ತಿ ದ್ದಾರೆ. ಸ್ವಚ್ಚತೆಯ ಬಗ್ಗೆ ನಿಮ್ಮ ಸುತ್ತ-ಮುತ್ತಲಿನ ಜನರಲ್ಲೂ ಅರಿವು ಮಾಡಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದರು. 

ಯೋಜನೆಯ ಜಿಲ್ಲಾ ನಿರ್ದೇಶಕ ಎಂ. ಲಕ್ಷಣ, ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಜಿ. ಮಂಜುನಾಥ್ ಪಟೇಲ್, ಡಿ.ಸಿ.ಸಿ. ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ ಪುರಸಭೆ ಮಾಜಿ ಸದಸ್ಯ ಭಾನುವಳ್ಳಿ ಸುರೇಶ್ ಮಾತನಾಡಿದರು. 

ಈ ವೇಳೆ ನಿವೃತ್ತ ಯೋಧ ರಾಜಾಭಕ್ಷಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೀರಭದ್ರೇಶ್ವರ ದೇವಸ್ಥಾನ ಕಮಿಟಿಯ
ಬಿ.ಎನ್. ವೀರೇಶ್ ಅಧ್ಯಕ್ಷತೆ ವಹಿಸಿದ್ದರು.

ಪೊಲೀಸ್ ಮುಖ್ಯ ಪೇದೆ ವೆಂಕಟರಮಣ ಫಕೃದ್ದೀನ್ ಅಹ್ಮದ್, ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿಕಾರ್ಜುನ್ ಕಲಾಲ್ ಸದಾನಂದ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. 

ಮಲೇಬೆನ್ನೂರು ಯೋಜನಾ ಧಿಕಾರಿ ವಸಂತ್ ದೇವಾಡಿಗ ಪ್ರಾಸ್ತಾ ವಿಕವಾಗಿ ಮಾತನಾಡಿ, ಸಂಘದ ಸದಸ್ಯರಿಂದಾಗಿ ನಮ್ಮ ಯೋಜನೆ ಸಾಧನೆ ಮಾಡಿದೆ. ಮಲೇಬೆನ್ನೂರು ಯೋಜನಾಧಿಕಾರಿಗಳ ವ್ಯಾಪ್ತಿಯಲ್ಲಿ  9 ವಲಯಗಳಿದ್ದು ಎಲ್ಲಾ ವಲಯ ಗಳು ಉತ್ತಮ ಸಾಧನೆ ಮಾಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಮಲೇಬೆನ್ನೂರು ವಲಯ ಮೇಲ್ವಿಚಾರಕರಾದ ಶ್ರೀಮತಿ ಸಂಪತ್ ಲಕ್ಷ್ಮಿ ಸ್ವಾಗತಿಸಿದರು. ಅಕ್ಕನ ಬಳಗದ ಸದಸ್ಯರು ಪ್ರಾರ್ಥಿಸಿದರು. ಕೆ.ಬೇವಿನಹಳ್ಳಿ ವಲಯ ಮೇಲ್ವಿಚಾರಕ ಮಾರುತಿ ಗೌಡ ನಿರೂಪಿಸಿದರು. ಜಿಗಳಿ ವಲಯ ಮೇಲ್ವಿಚಾರಕ ಹರೀಶ್‌ ವಂದಿಸಿದರು.

error: Content is protected !!