ಕರ್ನಾಟಕ ರಕ್ಷಣಾ ವೇದಿಕೆಯ ಪ್ರತಿಭಟನೆಯಲ್ಲಿ ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ
ದಾವಣಗೆರೆ, ಜ. 2- ಕನ್ನಡ ಪರ ಹೋರಾಟಗಾರರನ್ನು ಜೈಲಿಗೆ ಕಳಿಸುವುದು ದೊಡ್ಡ ಅಪಮಾನ ಎಂದು ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಮತ್ತವರ ತಂಡದ ವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಕರವೇ ಜಿಲ್ಲಾ ಘಟಕದ ವತಿಯಿಂದ ಸ್ಥಳೀಯ ಮಹಾನಗರ ಪಾಲಿಕೆ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು.
ಕನ್ನಡ ನಾಡಿನ ಅಸ್ಮಿತೆಯ ಭಾಷೆಯ ಮಾನ್ಯತೆ ನೀಡುವ ಸಲುವಾಗಿ ಹೋರಾಟ ನಡೆಸಿದರೆ ಅಂತಹವರನ್ನು ಜೈಲಿಗೆ ಕಳಿಸುವುದು ದೊಡ್ಡ ಅನ್ಯಾಯ ಮಾಡಿದಂತೆ ಎಂದು ಹೇಳಿದರು.
ಕನ್ನಡದ ಅಸ್ಮಿತೆಗಾಗಿ ಹೋರಾಟ ಮಾಡು ವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಲ ವಾರು ಹೋರಾಟಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿದೆ ಎಂದರು.
ಕನ್ನಡ ನಾಮಫಲಕ ಹಾಕಬೇಕೆಂಬ ಸರ್ಕಾರದ ಆದೇಶವಿದ್ದರೂ ಸಹ ಕೆಲವರು ಉಲ್ಲಂಘಿಸಿದ್ದರು. ಅದನ್ನು ಪ್ರಶ್ನಿಸಿ ಹೋರಾಟ ಮಾಡಿದ ಕರವೇ ಕಾರ್ಯಕರ್ತರನ್ನು ಹಾಗೂ ರಾಜ್ಯಾಧ್ಯಕ್ಷರನ್ನು ಬಂಧಿಸಿರುವುದು ಕನ್ನಡಕ್ಕೆ ಕುತ್ತು ತಂದಂತೆ. ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಕಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ, ಕನ್ನಡ ಭಾಷೆ ಉಳಿವಿಗಾಗಿ ಹೋರಾಟ ಮಾಡಿದವರನ್ನು ಜೈಲಿಗೆ ಕಳಿಸುವುದಾದರೆ, ಲೂಟಿ ಕೋರರಿಗೆ ಎಲ್ಲಿಗೆ ಕಳಿಸಬೇಕು? ಎಂದು ಪ್ರಶ್ನಿಸಿದರು.
ಕನ್ನಡ ನಾಡಿನಲ್ಲಿ ಕನ್ನಡದಲ್ಲಿ ನಾಮಫಲಕ ಹಾಕಿ ಎಂದು ಒತ್ತಾಯಿಸುವ ಪರಿಸ್ಥಿತಿ ಬಂದಿ ರುವುದು ದುರಂತವೇ ಸರಿ. ಕಾಟಾಚಾರದ ಕನ್ನಡಿಗರಿಗೆ ಮತ್ತು ಪರಭಾಷಿಗರಿಗೆ ಕರವೇ ತಕ್ಕ ಉತ್ತರ ನೀಡಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಕರವೇ ಹೋರಾಟ ನ್ಯಾಯಯುತವಾಗಿದೆ. ಕರವೇ ಗಟ್ಟಿತನದ ಹೋರಾಟಕ್ಕೆ ಸಾಕ್ಷಿಯಾಗಿ ಕಸಾಪ ನಿಂತಿದೆ ಎಂದು ಹೇಳಿದರು.
ಏಕತಾ ವೇದಿಕೆ ರಾಜ್ಯಾಧ್ಯಕ್ಷ ಹಾಲೇಶನಾಯ್ಕ, ಕಸಾಪ ಜಿಲ್ಲಾ ಕಾರ್ಯದರ್ಶಿ ದಿಳ್ಳೆಪ್ಪ, ಕರವೇ ಕಾನೂನು ಘಟಕದ ಅಧ್ಯಕ್ಷ ಎ.ಸಿ. ರಾಘವೇಂದ್ರ, ಬಸಮ್ಮ, ಮಂಜುಳಾ ಗಣೇಶ್, ಮಂಜುಳಾ ಮಹಾಂತೇಶ್, ಜಿಲ್ಲಾ ವಕೀಲರ ಸಂಘದ ಸಹ ಕಾರ್ಯದರ್ಶಿ ಮಂಜುನಾಥ್, ನೀಲಕಂಠರಾವ್, ರಾಘವೇಂದ್ರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಖಜಾಂಚಿ ಎನ್.ವಿ.ಬದರಿನಾಥ್, ಕಾರ್ಯದರ್ಶಿ ಜಿ.ಎಸ್. ವೀರೇಶ್, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎನ್.ಎಸ್. ರಾಜು, ರವಿಕುಮಾರ್, ಸಂತೋಷ್, ಓ. ಮಹೇಶ್ವರಪ್ಪ, ಗಿರೀಶ್ ಕುಮಾರ್, ಎಂ.ಡಿ. ರಫೀಕ್, ತಮನ್ನಾ, ಸುರೇಶ್, ತುಳಸಿರಾಮ್, ಮುಸ್ತಫಾ, ನಾಗರಾಜ್, ಅಕ್ಷಯ್, ಧೀರೇಂದ್ರ, ಅಲ್ಲಾಭಕ್ಷಿ, ವಾಸುದೇವ್ ರಾಯ್ಕರ್, ಕೋಡಿಹಳ್ಳಿ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.