ವೀರಶೈವ-ಲಿಂಗಾಯತ ಸಮಾಜ ಇಬ್ಭಾಗಿಸುವ ಯತ್ನ ಸಲ್ಲದು

ವೀರಶೈವ-ಲಿಂಗಾಯತ ಸಮಾಜ ಇಬ್ಭಾಗಿಸುವ ಯತ್ನ ಸಲ್ಲದು

ದಾವಣಗೆರೆ, ಡಿ.25-  ವೀರಶೈವ ಲಿಂಗಾಯತ ಸಮಾಜವು ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತಿದೆ.  ಈ ಸಮಾಜವನ್ನು ಇಬ್ಭಾಗಿಸುವ ಯಾವುದೇ ಪ್ರಯತ್ನ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದ ಅಂಗವಾಗಿ ಭಾನುವಾರ ನಡೆದ ನೌಕರರ ಹಾಗೂ ಸಾಹಿತಿಗಳ ಅಧಿವೇಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಬಳಿ ಏನಿದೆಯೋ ಅದು ನಾಗರಿಕತೆ, ನಾವು ಏನು ಆಗಿದ್ದೇವೆಯೋ ಅದು ಸಂಸ್ಕೃತಿ. ನಮ್ಮಲ್ಲಿ ನಾಗರಿಕತೆ ಬೆಳೆದಿದೆ. ಆದರೆ ಸಂಸ್ಕೃತಿ ಬೆಳೆದಿಲ್ಲ ಎಂದು ಹೇಳಿದರು.

ವಚನಗಳಲ್ಲಿ ಬದುಕಿನ ಪಾಠವಿದೆ. ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ ಎಂಬ ವಚನಗಳು ಬದುಕಿಗೆ ದಾರಿದೀಪ ವಾಗಿವೆ ಎಂದು ಬೊಮ್ಮಾಯಿ ತಿಳಿಸಿದರು.

ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸಮಸ್ಯೆ ಗಂಭೀರವಾಗಿದ್ದು, ಮಹಾಸಭಾದಿಂದಲೇ ವಸತಿ ನಿಲಯಗಳನ್ನು ನಿರ್ಮಿಸ ಬೇಕು. ಸಮಾಜದ ಉದ್ಯೋ ಗಾಕಾಂಕ್ಷಿಗಳಿಗಾಗಿ ನಿರಂತರ ವಾಗಿ ಉದ್ಯೋಗ ಮೇಳ ಆಯೋಜಿಸುತ್ತಿರಬೇಕು. ಜಾತಿಗಣತಿ ಬಗ್ಗೆ ಹಲವು ಗೊಂದಲಗಳು ಇರುವುದ ರಿಂದ ಮಹಾಸ ಭಾದಿಂದಲೇ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ಯಲ್ಲಿ ಸಮಾಜದ ಎಲ್ಲ ಒಳಪಂಗಡಗಳು ವೀರಶೈವ ಲಿಂಗಾಯತ ಎಂದೇ ಬರೆಸಬೇಕು  ಎಂದು ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್ ಮಾತನಾಡಿ, ಶರಣ ಸಾಹಿತ್ಯವು ವಿಶ್ವಭ್ರಾತೃತ್ವ, ಜಾತ್ಯತೀತತೆ, ಸ್ತ್ರೀ ಸ್ವಾತಂತ್ರ್ಯದ ಸಂದೇಶವನ್ನು ಸಾರಿದೆ. ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಹೇಗೆ ಜನಪರ ಆಡಳಿತ ನಡೆಸಬೇಕು ಎಂಬ ಬಗ್ಗೆ ಕಿವಿ ಮಾತು ಹೇಳಿದೆ. ಶರಣ ಸಾಹಿತ್ಯವು ಲೋಕಕಲ್ಯಾಣದ ಸಾಹಿತ್ಯವಾಗಿದೆ ಎಂದು ಹೇಳಿದರು.

ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಲಿಂಗಾಯತ ಧರ್ಮ ಹಾಗೂ ಶರಣ ಸಾಹಿತ್ಯದ ವಿಚಾರ ಗಳನ್ನು ಪ್ರಸ್ತುತಪಡಿಸಲು ಸಮಾಜವು ಚಿಂತನೆ ನಡೆಸ ಬೇಕಿದೆ ಎಂದು ಹೇಳಿದರು.

ಸತ್ಯ ನುಡಿಯುವುದೇ ಧರ್ಮವಾಗಿದೆ. ದೇವಾಲಯ ಕಟ್ಟುವ ಅವಶ್ಯಕತೆಯಿಲ್ಲ. ಮನಸ್ಸು ಶುದ್ಧವಾಗಿ ರುವುದೇ ಮುಖ್ಯ. ವಚನ ಸಾಹಿತ್ಯದಲ್ಲಿ ನಾನು ಶ್ರೇಷ್ಠ ಎಂಬ ಪದವೇ ಇಲ್ಲ. ಅಲ್ಲಿ ಹೇಗೆ ಬದುಕಬೇಕು ಎಂಬ ಅರಿವು ಇದೆ ಎಂದರು.

ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಕೃಷಿಯಲ್ಲಿ ತೊಡಗಿರುವ ಯುವಕರಿಗೆ ಕನ್ಯೆಯೇ ಸಿಗುತ್ತಿಲ್ಲ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತ ಸಮಾಜದ ಯುವಕರಿಗೆ ಮದುವೆಯಾಗಲು ಕನ್ಯೆ ಸಿಗುತ್ತಿಲ್ಲ. ಯುವತಿಯರು ಹಾಗೂ ಪಾಲಕರು ಸರ್ಕಾರಿ ನೌಕರಿ ಇರುವವರನ್ನೇ ಬಯಸುತ್ತಿರುವುದರಿಂದ ಯುವಕರಿಗೆ 30-35 ವಯಸ್ಸು ಕಳೆದರೂ ಮದುವೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ  ಮಹಾಸಭಾದಿಂದ ಪ್ರತೀ ವರ್ಷವೂ ವಧು-ವರರ ಸಮಾವೇಶ ಆಯೋಜಿಸಬೇಕು ಎಂದು ಸಲಹೆ ನೀಡಿದರು. 

ಮಹಾಸಭಾದ ಉಪಾಧ್ಯಕ್ಷ ಶಂಕರ್‌  ಬಿದರಿ, ಸಮಾಜದ ಮಹನೀಯರ ತ್ಯಾಗ, ದಾನ ಶ್ಲ್ಯಾಘನೀಯ ಎಂದರು. ಕೆ.ವಿ.ಎಲ್‌. ಅಧಿಕಾರಿಗಳ ಸಂಘದ ಉಪಾಧ್ಯಕ್ಷ ರವಿ ತಿರ್ಲಾಪುರ್, ಮುಖಂಡ ಎಸ್‌.ಎಸ್‌.ಪಾಟೀಲ ಮಾತನಾಡಿದರು. 

ಶಾಸಕರಾದ ಭರಮಗೌಡ ಕಾಗೆ, ಬಾಬಾ ಸಾಹೇಬ ಡಿ.ಪಾಟೀಲ, ಎಚ್‌.ಡಿ.ತಮ್ಮಯ್ಯ, ವಿಜಯಾನಂದ ಕಾಶಪ್ಪನವರ, ಸಾಹಿತಿ ಬಾ.ಮ.ಬಸವರಾಜಯ್ಯ, ಮುಖಂಡ ಕೆ.ಜೆ.ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

error: Content is protected !!