ವಿಳಂಬವಾಗುತ್ತಿದೆ ಗೃಹಲಕ್ಷ್ಮಿ!

ವಿಳಂಬವಾಗುತ್ತಿದೆ ಗೃಹಲಕ್ಷ್ಮಿ!

ದಾವಣಗೆರೆ, ಡಿ. 22 – ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ನೀಡುವ §ಗ್ಯಾರಂಟಿ¬ ಜಾರಿಗೆ ತಂದಿದೆ. ಆದರೆ, ಈ ಗ್ಯಾರಂಟಿ ಹಣ ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ಜಮಾ ಆಗುವು ದಕ್ಕೆ ಮಾತ್ರ ಇನ್ನೂ ಗ್ಯಾರಂಟಿ ಸಿಕ್ಕಿಲ್ಲ!

ಆಗಸ್ಟ್ ತಿಂಗಳಲ್ಲಿ ಈ ಯೋಜನೆ ಆರಂಭವಾಗಿತ್ತು. ಎರಡು ತಿಂಗಳಲ್ಲಿ ಯೋಜನೆಯ ಕಂತುಗಳು ಜಮಾ ಆಗಿವೆ. ಆದರೆ, ನವೆಂಬರ್ ಹಾಗೂ ಡಿಸೆಂಬರ್‌ಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯ ಹಣ ಮನೆಯೊ ಡತಿಯರ ಖಾತೆಗಳಿಗೆ ಜಮಾ ಆಗಿಲ್ಲ.

ದಾವಣಗೆರೆ ತಾಲ್ಲೂಕಿನಲ್ಲಿ 1,18,459 ಗೃಹಿಣಿಯರು ಈ ಯೋಜನೆಗೆ ನೋಂದಣಿ ಯಾಗಿದ್ದಾರೆ. ಜಗಳೂರಿನಲ್ಲಿ 38,610, ಹರಿಹರದಲ್ಲಿ 53,199, ಹೊನ್ನಾಳಿಯಲ್ಲಿ 31,179, ನ್ಯಾಮತಿಯಲ್ಲಿ 20,745 ಹಾಗೂ ಚನ್ನಗಿರಿಯಲ್ಲಿ 72,009 ಮನೆಯೊ ಡತಿಯರು ಈ ಯೋಜನೆಗೆ ಸೇರ್ಪಡೆಯಾಗಿ ದ್ದಾರೆ. ಒಟ್ಟು 3,34,201 ಗೃಹಿಣಿಯರು ಈ ಯೋಜನೆಗೆ ನೋಂದಾಯಿತರಾಗಿದ್ದಾರೆ.

ಆಗಸ್ಟ್ ತಿಂಗಳಲ್ಲಿ 3,05,557 ಫಲಾನುಭವಿಗಳಿಗೆ 61.11 ಕೋಟಿ ರೂ. ಜಮಾ ಆಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 3,02,930 ಫಲಾನುಭವಿಗಳಿಗೆ 60.58 ಕೋಟಿ ರೂ.ಗಳ ಹಣ ಜಮಾ ಆಗಿದೆ. ಯೋಜನೆಗೆ ನೋಂದಾಯಿತರಾದ ಇನ್ನೂ 22,566 ಮನೆಯೊಡತಿಯರ ಖಾತೆಗಳಿಗೆ ಹಣ ಜಮಾ ಆಗುವುದು ನಾನಾ ಕಾರಣಗಳಿಂದ ಬಾಕಿ ಇದೆ.

ಆದರೆ, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮನೆಯೊಡತಿಯರ ಖಾತೆಗಳಿಗೆ ಹಣ ಜಮಾ ಆಗಿಲ್ಲ. ಇಂದು – ನಾಳೆ ಹಣ ಬರಬಹುದು ಎಂದು ಮನೆಯೊಡತಿಯರು ಕಾದಿದ್ದೇ ಆಗಿದೆ. ಡಿಸೆಂಬರ್ ತಿಂಗಳ ಅಂತ್ಯವಾಗುತ್ತಾ ಬಂದರೂ ಗೃಹಲಕ್ಷ್ಮಿ ಯೋಜನೆಯ ಕಂತು ಮಾತ್ರ ಬಿಡುಗಡೆಯಾಗಿಲ್ಲ.

ಕಳೆದ ಒಂದು ತಿಂಗಳಿನಿಂದ ಇಡೀ ಆಡಳಿತ ಯಂತ್ರ ಬೆಳಗಾವಿಯ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ತೊಡಗಿಕೊಂಡಿತ್ತು. ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ವಿಳಂಬವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗೃಹಲಕ್ಷ್ಮಿ ಯೋಜನೆ ಜಾರಿಯಾಗುತ್ತಿದೆ. ರಾಜ್ಯ ಮಟ್ಟದ ಕಚೇರಿಯಿಂದಲೇ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದೆ. 

ಅಧಿವೇಶನ ಈಗ ಮುಕ್ತಾಯವಾಗಿದೆ. ಖಾತೆಗಳಿಗೆ ಹಣ ಜಮಾ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಖಾತೆಗಳಿಗೆ ಉಳಿದ ಕಂತುಗಳು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

error: Content is protected !!