ವೀರಶೈವ ಮಹಾ ಅಧಿವೇಶನಕ್ಕೆ ಕ್ಷಣಗಣನೆ

ವೀರಶೈವ ಮಹಾ ಅಧಿವೇಶನಕ್ಕೆ ಕ್ಷಣಗಣನೆ

105 ವರ್ಷಗಳ ನಂತರ ದಾವಣಗೆರೆ ಆತಿಥ್ಯ, 2 ಲಕ್ಷ ಜನ ಸೇರುವ ನಿರೀಕ್ಷೆ

ದಾವಣಗೆರೆಯ ಎಂ.ಬಿ.ಎ. ಕಾಲೇಜು ಆವರಣದಲ್ಲಿ ಇಂದು ಹಾಗೂ ನಾಳೆ ನಡೆಯಲಿ ರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನಕ್ಕೆ ಕ್ಷಣ ಗಣನೆ ನಡೆಯು ತ್ತಿದ್ದು, ಬಹುತೇಕ ಎಲ್ಲಾ ಸಿದ್ಧತೆಗಳೂ ಪೂರ್ಣ ಗೊಂಡಿವೆ. ಅಧಿವೇಶನಕ್ಕೂ ಮುನ್ನಾ ದಿನವಾದ ಶುಕ್ರವಾರವೇ ವಿವಿಧ ಜಿಲ್ಲೆಗಳಿಂದ ಸಮಾಜದ ಮುಖಂಡರುಗಳು ನಗರದಲ್ಲಿ ಬೀಡು ಬಿಟ್ಟಿದ್ದಾರೆ.

ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಐತಿಹಾಸಿಕ ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮಾಜದ ಪ್ರಮುಖರ ಜೊತೆ ಎರಡೂ ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಸಮಾರಂಭದ ತಯಾರಿಯಲ್ಲಿ ಕಳೆದೆರಡು ದಿನಗಳಿಂದ ತೊಡಗಿಸಿಕೊಂಡಿದ್ದಾರೆ.

ನಾಡಿನ 12 ಜಗದ್ಗುರುಗಳು,  400ಕ್ಕೂ ಹೆಚ್ಚು ಶಿವಾಚಾರ್ಯರು, ಹರ-ಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ. 

ಬೃಹತ್ ಪೆಂಡಾಲ್ : ಸಮಾವೇಶಕ್ಕೆ ಮುಖ್ಯ ವೇದಿಕೆಗೆ 220×400 ಅಡಿಯ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಅತಿಥಿ ಗಣ್ಯರಿಗಾಗಿ 60×100 ವೇದಿಕೆ ಸಿದ್ಧಗೊಂಡಿದೆ. ವೇದಿಕೆ ಮುಂಭಾಗ 40 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆಯನ್ನು ಸಮೀಪದಿಂದಲೇ ನೋಡಲು ಅನುಕೂಲ ಮಾಡಿಕೊಡುವ ದೃಷ್ಟಿ ಯಿಂದ 10 ಎಲ್‌ಇಡಿ ವಾಲ್‌ಗಳನ್ನು ಅಳವಡಿಸ ಲಾಗಿದೆ. ಕೃಷಿ ಮತ್ತು ಕೈಗಾರಿಕೆಗೆ ಸಂಬಂಧಿಸಿದಂತೆ 120ಕ್ಕೂ ಹೆಚ್ಚು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ.

100 ಕೌಂಟರ್‌ಗಳಲ್ಲಿ ಊಟ: ಎರಡೂ ದಿನಗಳ ಸಮಾವೇಶಕ್ಕೆ ಆಗಮಿಸುವವರಿಗೆ  ಭರ್ಜರಿ ಭೋಜನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗೋದಿ ಪಾಯಸ, ಲಾಡು, ರೊಟ್ಟಿ, ಚಟ್ನಿಪುಡಿ, ಪಲ್ಯ, ಭಜಿ, ಮೊಸರು, ಚಿತ್ರಾನ್ನ ಇವು ಊಟದ ಮೆನು. ಇನ್ನು ವೇದಿಕೆ ಬಳಿ 100 ಕೌಂಟರ್‌ಗಳನ್ನು ನಿರ್ಮಿಸಲಾಗಿದೆ.

1 ಸಾವಿರ ಬಸ್‌ಗಳು: ರಾಜ್ಯದ ವಿವಿಧ ಜಿಲ್ಲೆಗಳಿಂದ 1 ಸಾವಿರ ಬಸ್‌ಗಳ ಮೂಲಕ ಜನರು ಆಗಮಿಸುವ ನಿರೀಕ್ಷೆ ಇದೆ. 300ಕ್ಕೂ ಕ್ರೂಸರ್‌ವಾಹನಗಳೂ ಸೇರಿದಂತೆ ಖಾಸಗಿ ವಾಹನಗಳ ಮೂಲಕವೂ ಜನರು ದೇವನಗರಿಗೆ ದಾಂಗುಡಿ ಇಡಲಿದ್ದಾರೆ.

ವಸತಿ ವ್ಯವಸ್ಥೆ: ಪರ ಊರುಗಳಿಂದ ಬರುವ ವರಿಗೆ ನಗರದ ಬಹುತೇಕ ಲಾಡ್ಜ್‌ಗಳು ಹಾಗೂ ಕಲ್ಯಾಣ ಮಂಟಪಗಳಲ್ಲಿ ವಸತಿ ಸೌಲಭ್ಯ ಕಲ್ಪಿಸ ಲಾಗುತ್ತಿದೆ. ಇನ್ನು ಹರಿಹರ ಭಾಗದ ಭಕ್ತರಿಗೆ ಹರಿಹರದ ವೀರಶೈವ ಲಿಂಗಾಯತ ಪಂಚಮ ಸಾಲಿ ಮಠದಲ್ಲಿ ಹಾಗೂ ಚಿತ್ರದುರ್ಗ ಮಾರ್ಗ ವಾಗಿ ಬರುವ ಭಕ್ತರಿಗೆ ಸಿರಿಗೆರೆ ಶ್ರೀ ತರಳಬಾಳು ಮಠ ಹಾಗೂ ಚಿತ್ರದುರ್ಗದ ಮುರುಘಾ ಮಠದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಅಂದ ಹಾಗೆ ವೀರಶೈವ-ಲಿಂಗಾಯದ ಸಮುದಾಯದ ಎಲ್ಲಾ ಒಳ ಪಂಗಡಗಳಿಗೆ ಒಬಿಸಿ ಮೀಸಲಾತಿ ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸುವ ಹಾಗೂ ಜಾತಿ ಗಣತಿಗೆ ಸಂಬಂಧಿತ ವಿಚಾರಗಳು ಪ್ರಮು ಖವಾಗಿ ಈ ಅಧಿವೇಶನದಲ್ಲಿ ಚರ್ಚಗೆ ಬರಲಿವೆ.


ವೀರಶೈವ ಮಹಾ ಅಧಿವೇಶನಕ್ಕೆ ಕ್ಷಣಗಣನೆ - Janathavani– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ

error: Content is protected !!