ದಾವಣಗೆರೆ, ಡಿ. 14- ನಗರದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಏರ್ಪಡಿಸಲಾಗಿತ್ತು.
ಜಿಲ್ಲೆಯ ವಿವಿಧ ಭಾಗಗಳಿಂದ 63 ಸ್ಪರ್ಧಿಗಳು ಭಾಗವಹಿಸಿ, ಸಿರಿಧಾನ್ಯಗಳಿಂದ ಮಾಡಿದ್ದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಸುಪ್ರಿಯಾ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಸಿಹಿ ಖಾದ್ಯದಲ್ಲಿ ದಾವಣಗೆರೆಯ ಸಿದ್ದೇಶ್, ಪ್ರಥ ಮ ಬಹುಮಾನ, ರಾಕೇಶ್ ಎ.ಎಂ. ದ್ವಿತೀಯ ಹಾಗೂ ಶಿಲ್ಪ ದರ್ಶನ್ ತೃತೀಯ ಬಹುಮಾನ ಪಡೆದರು. ಖಾರದ ತಿನಿಸುಗಳಲ್ಲಿ ಜಿ.ಎಂ.ಎಸ್. ರಾಜೇಶ್, ಪಿ.ಜೆ. ಶಶಿಕಲಾ ಹಾಗೂ ದೀಕ್ಷ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು.