ಎಸ್ಸೆನ್ ಮನೆ ಸ್ಮಾರಕಕ್ಕೆ ವಿಳಂಬ ಧೋರಣೆ ಏಕೆ

ಎಸ್ಸೆನ್ ಮನೆ ಸ್ಮಾರಕಕ್ಕೆ ವಿಳಂಬ ಧೋರಣೆ ಏಕೆ

ಮೋಹನ್‌ಕುಮಾರ್ ಕೊಂಡಜ್ಜಿ ಪ್ರಶ್ನೆ

ದಾವಣಗೆರೆ, ಡಿ.11-  ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪನವರ 121ನೇ ಜನ್ಮ ದಿನ ದಂದು ವಿಧಾನಸೌಧದ ಆವರಣದಲ್ಲಿ ನಿನ್ನೆ ಜರು ಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಸೆನ್ ಭಾವಚಿತ್ರ ಮತ್ತು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ವಿಶ್ರಾಂತ ನ್ಯಾಯಾಧೀಶರಾದ ಶಿವರಾಜ್ ಪಾಟೀಲ್, ಎಸ್.ಜಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್  ಮತ್ತು   ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್  ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ   ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್‌ಕುಮಾರ್ ಕೊಂಡಜ್ಜಿ ಅವರು, ಚಿತ್ರದುರ್ಗದಲ್ಲಿರುವ ನಿಜಲಿಂಗಪ್ಪರ ಮನೆಯನ್ನು ಸರ್ಕಾರ ವಹಿಸಿಕೊಂಡು ಸ್ಮಾರಕ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವುದು ಏಕೆ? ಎಂದು  ಪ್ರಶ್ನಿಸಿ ದ್ದಾರೆ. ಇದಕ್ಕಾಗಿ ಆಯವ್ಯಯದಲ್ಲಿ 5 ಕೋಟಿ ರೂ. ಗಳನ್ನು ಮೀಸಲಿರಿಸಲಾಗಿದೆ, ಆದಾಗ್ಯೂ ಚಿತ್ರ ದುರ್ಗದ ಜಿಲ್ಲಾಡಳಿತದ ನಿರಾಸಕ್ತಿಯೋ ಏನೋ ಕಳೆದ ಮೂರು ವರ್ಷಗಳಿಂದ ಕಡತ ದೂಳಿಡಿದಿದೆ, ಯಾರೂ ಅದರ ಬಗ್ಗೆ ಆಸಕ್ತಿ ತೋರುತ್ತಿಲ್ಲ, ಏನಾದರೂ ಸಮಸ್ಯೆಗಳಿದ್ದರೆ, ಬಗೆಹರಿಸಲು ಕನಿಷ್ಟ ಸಭೆಯನ್ನೂ ಕರೆದಿಲ್ಲ.  ಇದೆಂಥ ಆಡಳಿತದ ದುರ ವಸ್ಥೆ ಎಂದೂ ಅವರು ತೀಕ್ಷ್ಣವಾಗಿಯೇ ಪ್ರಶ್ನಿಸಿದ್ದಾರೆ.

ಅಮೆರಿಕಾದಲ್ಲಿರುವ ನಿಜಲಿಂಗಪ್ಪನವರ ಮಗ ಮತ್ತು ಮೊಮ್ಮಗ ಆಸ್ತಿಯನ್ನು ಸರ್ಕಾರದ ಸುಪರ್ದಿಗೆ ವಹಿಸಲು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಮಯ ನಿಗದಿ ಪಡಿಸಲಾಗಿತ್ತು. ಅಮೆರಿಕಾದಿಂದ ಮಗ, ಮೊಮ್ಮಗ ಕೂಡಾ ಬಂದಿದ್ದರೂ ಕೊನೇ ಗಳಿಗೆಯಲ್ಲಿ ಆಸ್ತಿ ವರ್ಗಾವಣೆ ವಿಧಾನ  ರದ್ಧು ಮಾಡಲಾಯಿತು. ಇದನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸದೇ ಇದ್ದದ್ದು ದುರದೃಷ್ಟಕರ. ಹಾಗಾಗಿ ಈಗಲಾದರೂ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಶೇಷ ಆಸಕ್ತಿ ವಹಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಲ್ಲಿ ಮೋಹನ್‌ಕುಮಾರ್ ಕೊಂಡಜ್ಜಿ ಮನವಿ ಮಾಡಿದ್ದಾರೆ.

error: Content is protected !!