ಜಗಳೂರು ದಾವಣಗೆರೆಯಲ್ಲಿಯೇ ಇರಲಿ

ಜಗಳೂರು ದಾವಣಗೆರೆಯಲ್ಲಿಯೇ ಇರಲಿ

ಜಗಳೂರು, ಡಿ.10- ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆಗೆ ಸೇರಿದ್ದರ ಪ್ರತಿ ಫಲವಾಗಿ 57 ಕೆರೆಗಳಿಗೆ ನೀರು, ಭದ್ರಾ ಮೇಲ್ದಂಡೆ ಯೋಜನೆಗಳು, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವಾರು ಸೌಲಭ್ಯ ಗಳನ್ನು ಕಲ್ಪಿಸಿಕೊಟ್ಟಿರುವ ದಾವಣಗೆರೆ ಜಿಲ್ಲೆಯಲ್ಲೇ ಜಗಳೂರು ಮುಂದು ವರೆಯಬೇಕೆಂದು ಹೋರಾಟ ಸಮಿತಿಯ ಮುಖಂಡ ರಾದ ಸುಭಾಸ್‍ಚಂದ್ರಬೋಸ್ ಹೇಳಿದರು. 

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ದಾವಣಗೆರೆ ಜಿಲ್ಲೆಯಲ್ಲೇ ಜಗಳೂರು ಮುಂದುವರೆಯಬೇಕು ಎಂದು  ಒತ್ತಾಯಿಸಲು ಕರೆದಿದ್ದ ಮುಖಂ ಡರುಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಅವರು ಮಾತನಾಡಿದರು. 

1997 ರಲ್ಲಿ ಗದ್ದಿಗೌಡರ್, ಹುಂಡೇ ಕರ್, ವಾಸುದೇವರ ಸಮಿತಿ ಆಧರಿಸಿ ಭೌಗೋಳಿಕ ವಾಗಿ ಆಗಿನ 20 ಜಿಲ್ಲೆಗಳನ್ನು 27 ಕ್ಕೆ ಏರಿಸಿ ಆಗಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲರು ಚಿತ್ರದುರ್ಗದಲ್ಲಿದ್ದ ದಾವಣಗೆರೆಯನ್ನು ಬೇರ್ಪಡಿಸಿ, ದಾವಣಗೆರೆ ಜಿಲ್ಲೆ ಮಾಡಿ, ದಾವ ಣಗೆರೆಗೆ ಜಗಳೂರು ಸೇರಿಸಿದ್ದರು. ದಾವಣಗೆರೆ ಸೇರಿ 25 ವರ್ಷಗಳಿಂದ ಜಗಳೂರು ಅಭಿವೃದ್ಧಿಯತ್ತ ಮುನ್ನಡೆಯುತ್ತಿರುವುದು ಜನರಿಗೆ ಸಾಕ್ಷಿಯಾಗಿದೆ ಎಂದರು.

ಹಿರಿಯ ವಕೀಲ ತುಪ್ಪದಹಳ್ಳಿ ಬಸವರಾಜಪ್ಪ ಮಾತನಾಡಿ, ಜಗಳೂರು ದಾವ ಣಗೆರೆಗೆ ಸೇರಿದ ನಂತರ ನೂತನ ಕೋರ್ಟ್‌ ಕಟ್ಟಡ, ಅಗ್ನಿಶಾಮಕ ಠಾಣೆ, ಐಟಿಐ ಕಾಲೇಜು, ಡಿಗ್ರಿ ಕಾಲೇಜು, ದಾವಣಗೆರೆಯಲ್ಲಿ ಉನ್ನತ ಶಿಕ್ಷಣ ಸೇರಿದಂತೆ ಹಲವಾರು ಸಲವತ್ತುಗಳು ಸಿಗುತ್ತಿವೆ. ಕೆಲವು ಜನರ ಸ್ವ-ಇತಾಸಕ್ತಿ ಯಿಂದ ಜಗಳೂರನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸ ಬೇಕೆಂಬ ದೂರಾಲೋಚನೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅದಕ್ಕೆ ಅವಕಾಶ ತಾಲ್ಲೂಕಿನ ಜನರು ಕೊಡುವುದಿಲ್ಲ ಎಂದರು.

ದಲಿತ ಸಮಾಜದ ಹಿರಿಯ ಮುಖಂಡ ಜಿ.ಹೆಚ್.ಶಂಭುಲಿಂಗಪ್ಪ ಮಾತನಾಡಿ, ಜಗ ಳೂರು ತಾಲ್ಲೂಕು ದಾವಣಗೆರೆ ಜಿಲ್ಲೆಗೆ ಸೇರಿ ದಾಗಿನಿಂದಲೂ ಜಗಳೂರಿಗೆ ಏನು ಅನ್ಯಾಯವಾಗಿದೆ ಎಂಬುದನ್ನು ತೋರಿಸಲಿ. ಸಂವಿಧಾನದ ಮೂಲಕವೇ ಎಲ್ಲಾ ಬಂದಿದೆ. ಅಭಿವೃದ್ಧಿಯತ್ತ ಜಗಳೂರು ಮುಂದುರೆಯುತ್ತಿದೆ. ದಾವಣಗೆರೆಯಲ್ಲೇ ಜಗಳೂರು ಉಳಿಯಬೇಕು. ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.

ದಾವಣಗೆರೆ ಜಿಲ್ಲೆಯಲ್ಲೇ ಜಗಳೂರು ಮುಂದುವರೆಯಲು ಶಾಸಕ ಬಿ.ದೇವೇಂದ್ರಪ್ಪ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ, ಕಂದಾಯ ಮಂತ್ರಿಗಳಿಗೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲು ಸಭೆ ಸರ್ವಾನುಮತದ ತೀರ್ಮಾನಿಸಲಾಯಿತಲ್ಲದೇ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಯಲು ಎಲ್ಲರು ಒಕ್ಕೊರಲಿನಿಂದ ಹೋರಾಟ ನಡೆಸಲು ಸನ್ನದ್ದರಾಗಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಲ್ಲೇ ಜಗಳೂರು ತಾಲ್ಲೂಕನ್ನು ಉಳಿಸುವ ಹೋರಾಟದ ಸಮಿತಿಯ ಮುಖಂಡರಾದ ಶಿವನಗೌಡ, ಬಸಾಪುರ ರವಿಚಂದ್ರ, ಹೆಚ್.ಸಿ.ಮಹೇಶ್, ಚಂದ್ರನಾಯ್ಕ್, ವೈ.ಎನ್.ಮಂಜುನಾಥ್, ನಾಗರಾಜ್‌ ನಾಯಕ್, ಓಮಣ್ಣ, ಕರಿಬಸವನಗೌಡ, ಶಿವಕುಮಾರಸ್ವಾಮಿ, ಗೋಗುದ್ದು ರಾಜು, ಗೋಡೆ ಪ್ರಕಾಶ್, ವೀರೇಂದ್ರ ಪಾಟೀಲ್, ಎಂ.ಎಸ್.ಪಾಟೀಲ್, ಡೆಂಕಪ್ಳ ಬಸವರಾಜ್, ಬೆಲ್ಲದ ಬಸವರಾಜ್, ಗಿರೀಶ್, ಜಗದೀಶ್‍ಗೌಡ್ರು, ಹರೀಶ್, ದೀಪಕ್‌ ಪಾಟೀಲ್, ಅಸಗೋಡು ಸುರೇಶ್‍ಗೌಡ್ರು ಮುಂತಾದವರು ಉಪಸ್ಥಿತರಿದ್ದರು.

error: Content is protected !!