ಕಲೆ ದೈವೀದತ್ತ, ವಯೋ ಮಿತಿಯಿಲ್ಲ

ಕಲೆ ದೈವೀದತ್ತ, ವಯೋ ಮಿತಿಯಿಲ್ಲ

ಪ್ರೊ.ಬಿ.ಡಿ.ಕುಂಬಾರ್

ದಾವಣಗೆರೆ, ಡಿ.6- ಕಲೆ ದೈವೀದತ್ತವಾದುದು. ಕಲಾಭಿವ್ಯಕ್ತಿಗೆ ವಯೋಮಾನದ ಮಿತಿ ಎಂಬುದಿಲ್ಲ. ನಿರಂತರ ಅಭ್ಯಾಸದಲ್ಲಿದ್ದರೆ, ಕಲಾ ರಚನೆಯಲ್ಲಿ ಕಲಾವಿದರು ಸತತವಾಗಿ ತೊಡಗಿಕೊಂಡಿದ್ದರೆ ಮಾತ್ರ ಕಲಾ ಪ್ರತಿಭೆ ಪ್ರಬುದ್ಧತೆ ಪಡೆದುಕೊಳ್ಳುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಹೇಳಿದರು.

ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ ದೃಶ್ಯ ವಿಶ್ವ ಕಲಾ ಗ್ಯಾಲರಿಯಲ್ಲಿ ಇಂದಿನಿಂದ ಏರ್ಪಟ್ಟಿರುವ ದೃಶ್ಯಾನುಭವ 2023 ಶೀರ್ಷಿಕೆಯ ಚಿತ್ರ ಕಲೆ ಮತ್ತು ಅನ್ವಯಿಕ ಕಲಾ ವಿಭಾಗಗಳ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಸಮೂಹ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಾವಣಗೆರೆ ವಿವಿಯ ದೃಶ್ಯ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭೆ ಗುರುತರವಾದುದು. ಹಾಗಾಗಿ ಇಂದು ಕಲಾಕೃತಿಗಳನ್ನು ಪ್ರದರ್ಶಿಸುತ್ತಿರುವ ಈ ಮಹಾವಿದ್ಯಾಲಯದ ಸ್ನಾತಕೋತ್ತರ ಪದವಿಯ ಚಿತ್ರ ಕಲೆ ಹಾಗೂ ಅನ್ವಯಿಕ ಕಲಾ ವಿದ್ಯಾರ್ಥಿಗಳು ಕಲಾ ರಚನೆ ಯನ್ನು ಇಲ್ಲಿಗೇ ಮುಕ್ತಾಯಗೊಳಿಸದೇ, ಅದನ್ನು ಮುಂಬರುವ ದಿನಗಳಲ್ಲೂ ಮುಂದುವರೆಸಬೇಕು. ತನ್ಮೂಲಕ ಔದ್ಯೋಗಿಕ ಅವಕಾಶಗಳು ದೊರಕು ವಂತೆ ಪ್ರಯತ್ನಶೀಲರಾಗಬೇಕು ಎಂದು ಕರೆ ನೀಡಿದರು.

ಪ್ರಾಚಾರ್ಯ ಡಾ.ಜೈರಾಜ ಚಿಕ್ಕ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕಲಾಪ್ರದರ್ಶನ ಡಿಸೆಂಬರ್ 9ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 6ಗಂಟೆವರೆಗೆ ನಡೆಯಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ದಾವಣಗೆರೆಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ರಾಘವೇಂದ್ರ ಪ್ರಸಾದ್, ಡಾ.ರವೀಂದ್ರ ಎಸ್.ಕಮ್ಮಾರ್, ಬೋಧನಾ ಸಹಾಯಕರಾದ ಶಿವಶಂಕರ್ ಸುತಾರ್, ದತ್ತಾತ್ರೇಯ ಎನ್.ಭಟ್ಟ, ಡಾ.ಸಂತೋಷ್‍ಕುಮಾರ್ ಕುಲಕರ್ಣಿ, ಡಾ.ಗಿರೀಶ್‍ಕುಮಾರ್, ಎಸ್.ಹೆಚ್.ಹರೀಶ್, ಕೆ.ವಿ.ಪ್ರಮೋದ್, ಡಿ.ಹೆಚ್.ಸುರೇಶ್, ರಂಗನಾಥ್ ಕುಲಕರ್ಣಿ, ನವೀನ್‍ಕುಮಾರ್, ಅರುಣ್ ಕಮ್ಮಾರ್, ನಂದಕುಮಾರ್, ಶಿವಕುಮಾರ್ ಅಜಗಣ್ಣವರ್, ರೇವಣಸಿದ್ದಪ್ಪ, ಮಹಾಲಿಂಗಪ್ಪ ಇತರರು ಇದ್ದರು.

error: Content is protected !!