ದಾವಣಗೆರೆ,ನ.27- ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ, ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಮಹಿಳಾ ಸಮಾಜದಿಂದ ಶಿವಾಜಿ ನಗರದಲ್ಲಿನ ಚಿತ್ರಗಾರಗಲ್ಲಿಯಲ್ಲಿ ಶ್ರೀ ನಿಮಿಷಾಂಬ ದೇವಿಯ 65ನೇ ವಾರ್ಷಿಕ ಮಹೋತ್ಸವವನ್ನು ಭಾನುವಾರ ಆಚರಿಸಲಾಯಿತು. ಬೆಳಿಗ್ಗೆ ವಿಶೇಷ ಪೂಜೆ ನಂತರ ದೇವಿಯ ಉತ್ಸವ ಮೂರ್ತಿಯನ್ನು ರಾಜ ಬೀದಿಗಳಲ್ಲಿ ವಿವಿಧ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
December 24, 2024