ಬಲಿಗಾಗಿ ಕಾದಿದೆ ಎಪಿಎಂಸಿ ಮೇಲ್ಸೇತುವೆ ಅಂಚು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಬಲಿಗಾಗಿ ಕಾದಿದೆ ಎಪಿಎಂಸಿ ಮೇಲ್ಸೇತುವೆ ಅಂಚು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಇದು ದಾವಣಗೆರೆ ಎಪಿಎಂಸಿ ಬಳಿಯ ಮೇಲ್ಸೇತುವೆ. ಸೇತುವೆಯ ದ್ವಿಮುಖ ರಸ್ತೆಯ ಎರಡೂ ಅಂಚಿನಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದು ವರ್ಷವೇ ಗತಿಸಿದೆ. ಆದರೆ ರಿಪೇರಿ ಮಾಡುವಂತಹ ಔದಾರ್ಯವನ್ನು ಯಾವ ಅಧಿಕಾರಿಗಳೂ ತೋರಿಸದಿರುವುದು ದುರಂತ. ರಸ್ತೆ ರಿಪೇರಿ ಉಸಾಬರಿ ನಮ್ಮದಲ್ಲ ರೈಲ್ವೇ ಇಲಾಖೆಯದ್ದು ಎಂದು ಎಪಿಎಂಸಿ ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ. ಆದರೆ ಕಷ್ಟ ಅನುಭವಿಸುತ್ತಿರುವುದು ಮಾತ್ರ ವಾಹನ ಚಾಲಕರು.

ಬೆಳಿಗ್ಗೆ ಹಾಗೂ ಸಂಜೆ ವೇಳೆ ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಮಹಿಳೆಯರು, ಶಾಲಾ ವಾಹನಗಳು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ಹಲವರು ಬಿದ್ದು ಎದ್ದು ಹೋಗಿದ್ದಾರೆ. ಇನ್ನು ಎಪಿಎಂಸಿಗೆ ಧಾನ್ಯ ಹೊತ್ತು ತರುವ  ಟ್ರ್ಯಾಕ್ಟರ್, ಲಾರಿಗಳದ್ದೂ ಅದೇ ಸಮಸ್ಯೆ. ಇಲ್ಲಿನ ವರ್ತಕರಂತೂ ಈ ಗುಂಡಿಗಳ ಸಮಸ್ಯೆಗೆ ಹೈರಾಣಾಗಿದ್ದಾರೆ. ಪ್ರಾಯಶಃ ಈ ರಸ್ತೆ ಬಲಿ ಪಡೆದ ನಂತರವೇ ರಿಪೇರಿಗೆ ಮುಂದಾಗಬಹುದೇನೋ? ಎಂಬುದು ಇಲ್ಲಿನ ಪ್ರಯಾಣಿಕರ ನೊಂದ ನುಡಿ. ಕೊನೆ ಪಕ್ಷ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತವಾದರೂ ಈ ರಸ್ತೆ ಬಗ್ಗೆ ಗಮನ ಹರಿಸಲಿ.

error: Content is protected !!