ಸುದೀರ್ಘ ಇತಿಹಾಸದ ಕನ್ನಡ ಉಳಿಸಲು ಒಂದಾಗೋಣ

ಸುದೀರ್ಘ ಇತಿಹಾಸದ ಕನ್ನಡ ಉಳಿಸಲು ಒಂದಾಗೋಣ

ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಕರೆ

ದಾವಣಗೆರೆ, ನ. 22- ಸುದೀರ್ಘ ಇತಿಹಾಸವುಳ್ಳ ಕನ್ನಡ ಭಾಷೆಯನ್ನು ಉಳಿಸುವಲ್ಲಿ ನಾವೆಲ್ಲರು ಒಂದಾಗುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ  ಬಿ.ವಾಮದೇವಪ್ಪ ಹೇಳಿದರು.

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಂಯುಕ್ತಾಶ್ರಯದಲ್ಲಿ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ `ಕನ್ನಡ ಪಠ್ಯ ಪುನರ್ಮನನ’ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆಯಲು ಎಲ್ಲರೂ ಸಿದ್ಧರಾಗುವಂತೆ ಹೇಳಿದ ಅವರು, ಕನ್ನಡ ಭಾಷೆಯ ಪುನಶ್ಚೇತನಕ್ಕೆ ಇಂತಹ ಕಾರ್ಯಾಗಾರಗಳು ಅತ್ಯವಶ್ಯವಾಗಿವೆ ಹಾಗೂ ಇಂತಹ ಉತ್ತಮ ಕಾರ್ಯಗಳಿಗೆ ಸಾಹಿತ್ಯ ಪರಿಷತ್‌ ಸದಾ ಜೊತೆಗಿರುತ್ತದೆ ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಪ್ರಾಂಶುಪಾಲ ಸುರೇಶ್ ಎಸ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಅಭೂತಪೂರ್ವ ಶಕ್ತಿಯುಳ್ಳದ್ದು, ಈ ಭಾಷೆಯ ಮೂಲಕ ಕನ್ನಡತನವನ್ನು ಮೈಗೂಡಿಸಿಕೊಂಡು ಬಾಳಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನೀರಜಾ ಸಿ.ಟಿ. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಮಾದರಿ ಹಾಗೂ ನೀಲ ನಕ್ಷೆಯ ಕುರಿತು ವಿಸ್ತೃತವಾಗಿ ತಿಳಿಸಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಸತ್ಯನಾರಾಯಣ ಅವರು ಪಿಯುಸಿ ಗದ್ಯ ಬೋಧನೆ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಪ್ರದೀಪ್ ಕುಮಾರ್ ಎಸ್., ಕೆ.ಹೆಚ್. ಮಂಜುನಾಥ ರೆಡ್ಡಿ, ಸಿ.ಟಿ. ರವಿ, ಶ್ವೇತಾ ಆರ್. ಗಾಂಧಿ ಆಗಮಿಸಿದ್ದರು.

ಎಸ್.ಎಂ. ಗಂಗಪ್ಪಳವರ್ ಅಧ್ಯಕ್ಷತೆ ವಹಿಸಿದ್ದರು. ನಾಗಪ್ಪ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಓಹಿಲೇಶ್ವರ್ ಸ್ವಾಗತಿಸಿದರು. ಉಷಾ ಇ ನಿರೂಪಿಸಿದರು. ಪ್ರದೀಪ್ ಕೆ.ವಿ. ಕಾರಂತ್‌ ವಂದಿಸಿದರು. ತಿಪ್ಪೇಸ್ವಾಮಿ ಕೆ., ರಾ ಮಾಂಜನೇಯ, ಎನ್., ದೇವರಾಜ್, ಪ್ರಸನ್ನ, ಲತೀಫ್ ನವಿಲೇಹಾಳ್ ಉಪಸ್ಥಿತರಿದ್ದರು.

error: Content is protected !!