ಸಮ್ಮೇಳನವು ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಪೂರಕವಾಗಲಿ

ಸಮ್ಮೇಳನವು ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಪೂರಕವಾಗಲಿ

ಹಿರಿಯ ಶಾಸಕ ಎಸ್ಸೆಸ್ ಆಶಯ

ದಾವಣಗೆರೆ, ನ. 19- ಬರುವ ಜನವರಿ ಯಲ್ಲಿ ನಗರದಲ್ಲಿ ಆಯೋಜನೆಗೊಂಡಿ ರುವ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನವು ಸಮಸ್ತ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ರಲಿ ಎಂದು ಮಾಜಿ ಸಚಿವರೂ ಆದ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಶುಭ ಹಾರೈಸಿದರು.

ಸ್ಥಳೀಯ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ `ಶಿವ-ಪಾರ್ವತಿ’ ನಿವಾಸದ ಗೃಹ ಕಛೇರಿಯಲ್ಲಿ ಇಂದು ಸಂಜೆ ಪತ್ರಕರ್ತರ ಸಮ್ಮೇ ಳನದ ಲಾಂಛನವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ರಾಜ್ಯ ಪತ್ರಕರ್ತರ ಸಮ್ಮೇಳನದ ಮಹಾ ಪೋಷಕರೂ ಆಗಿರುವ ಎಸ್ಸೆಸ್, ಕಳೆದ 31 ವರ್ಷಗಳ ಹಿಂದೆ ನಗರದ ಧರ್ಮಪ್ರಕಾಶ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ನಡೆದಿದ್ದ ರಾಜ್ಯ ಪತ್ರಕರ್ತರ ಸಮ್ಮೇಳನದ ಸ್ವಾಗತ ಸಮಿತಿಗೆ ತಾವೇ ಅಧ್ಯಕ್ಷರಾಗಿ ಯಶಸ್ವಿಗೊಳಿಸಿದ್ದನ್ನು ಮೆಲುಕು ಹಾಕಿದರು.

ಇದೀಗ ನಡೆಯುತ್ತಿರುವ ಪತ್ರಕರ್ತರ ರಾಜ್ಯ ಸಮ್ಮೇಳನವು ಪತ್ರಕರ್ತರ ಹಲವಾರು ಬೇಡಿಕೆಗಳ ಕುರಿತಂತೆ ನಿರ್ಣಯಗಳನ್ನು ಕೈಗೊಂಡು ಸರ್ಕಾರದ ಮುಂದಿಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಮಸ್ತ ಮಾಧ್ಯಮ ಮಿತ್ರರು ಒಗ್ಗಟ್ಟು ಪ್ರದರ್ಶಿಸಬೇಕು. ಈ ದಿಸೆಯಲ್ಲಿ ಎಲ್ಲರೂ ಸೇರಿ ಸಮ್ಮೇಳವನ್ನು ಯಶಸ್ವಿಗೊಳಿಸೋಣ ಎಂದು ಎಸ್ಸೆಸ್ ಹಾರೈಸಿದರು.

ಹಿರಿಯ ಪತ್ರಕರ್ತ-ಸಾಹಿತಿಯೂ ಆಗಿರುವ ಪತ್ರಕರ್ತರ ಸಮ್ಮೇಳನದ ಸ್ಮರಣ ಸಂಚಿಕೆ ಕಾರ್ಯನಿರ್ವಾಹಕ ಸಂಪಾದಕ
ಬಿ.ಎನ್. ಮಲ್ಲೇಶ್ ಮಾತನಾಡಿ, ಹಿಂದೆ ನಡೆದಿದ್ದ ಸಮ್ಮೇಳನದ ಬಗ್ಗೆ ಎಸ್ಸೆಸ್ ಅವರ ಗಮನ ಸೆಳೆದರಲ್ಲದೇ, ಈಗ ನಡೆಯುತ್ತಿರುವ ಸಮ್ಮೇಳನದ ಕುರಿತಂತೆ ಮಾಹಿತಿ ನೀಡಿದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರೂ ಆಗಿರುವ ರಾಜ್ಯ ಪತ್ರಕರ್ತರ ಸಮ್ಮೇಳನದ ಸಂಚಾಲಕ ಕೆ. ಏಕಾಂತಪ್ಪ ಮಾತನಾಡಿ, ಹಿಂದೆ ನಡೆದಿದ್ದ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳ ಸಂಖ್ಯೆ ಕೇವಲ ಸಾವಿರದಲ್ಲಿತ್ತು. ಈಗ ನಡೆಯುತ್ತಿರುವ ಸಮ್ಮೇಳನದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ – ಸಾಹಿತಿಯೂ ಆದ ಪತ್ರಕರ್ತರ ಸಮ್ಮೇಳನದ ಸ್ಮರಣ ಸಂಚಿಕೆ ಸಂಪಾದಕ ಮಂಡಳಿ ಸದಸ್ಯ ಬಾ.ಮ. ಬಸವರಾಜಯ್ಯ ಮಾತನಾಡಿ, ಪತ್ರಕರ್ತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಮತ್ತು ಪತ್ರಿಕೋದ್ಯಮದ ಮುಂದಿರುವ ಸವಾಲುಗಳ ಕುರಿತಂತೆ ಸಮ್ಮೇಳನದಲ್ಲಿ ಅನೇಕ ಗೋಷ್ಠಿಗಳು ನಡೆಯಲಿವೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್ ಅವರುಗಳು ಎಸ್ಸೆಸ್ ಅವ ರನ್ನು ಗೌರವಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್  ಅವರಿಂದ ಸ್ವಾಗತ, ಖಜಾಂಚಿ ಎನ್.ವಿ. ಬದರಿನಾಥ್ ಅವರಿಂದ ವಂದನಾರ್ಪಣೆ, ನಿರ್ದೇಶಕ ಸಿ. ವೇದಮೂರ್ತಿ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.

ಸಂಘದ ಜಿಲ್ಲಾ ಉಪಾಧ್ಯಕ್ಷ ಹೆಚ್.ಎನ್. ಪ್ರಕಾಶ್, ಕಾರ್ಯದರ್ಶಿ ಜೆ.ಎಸ್. ವೀರೇಶ್, ಪತ್ರಕರ್ತ ಕೆ. ಜೈಮುನಿ,  ಛಾಯಾಗ್ರಾಹಕ ಯು.ಜಿ. ಮೊಹಮ್ಮದ್ ರಫೀಕ್ ಮತ್ತಿತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

error: Content is protected !!