ದೇಶದಲ್ಲಿ ಹೆಚ್ಚುತ್ತಿರುವ ಸೌರಶಕ್ತಿ ಬಳಕೆ : ಪಾರ್ಥಸಾರಥಿ

ದೇಶದಲ್ಲಿ ಹೆಚ್ಚುತ್ತಿರುವ ಸೌರಶಕ್ತಿ ಬಳಕೆ : ಪಾರ್ಥಸಾರಥಿ

ದಾವಣಗೆರೆ, ನ. 17- ಭಾರತದಲ್ಲಿ ಸೌರಶಕ್ತಿ ಬಳಕೆ ಹೆಚ್ಚುತ್ತಿದ್ದು, ಸೌರಶಕ್ತಿ ಬಳಸುವ ವಿಶ್ವದ ಅಗ್ರಮಾನ್ಯ 10 ದೇಶಗಳ ಪೈಕಿ ಭಾರತವೂ ಒಂದು ಎಂದು ಸೆಲ್ಮೋ ಸೋಲಾರ್ ಲೈಟ್ ಪ್ರೈ.ಲಿ. ಚೀಫ್ ಮ್ಯಾನೇಜರ್ ಪಾರ್ಥಸಾರಥಿ ಹೇಳಿದರು.

ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಹಾಗೂ ಸೆಲ್ಮೋ ಸೋಲಾರ್ ಲೈಟ್ ಪ್ರೈ.ಲಿ. ಇವರ ವತಿಯಿಂದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಸೌರಶಕ್ತಿ ಬಳಕೆಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೂರ್ಯನ ಬಿಸಿಲು ಮತ್ತು ಉಷ್ಣತೆಯನ್ನೇ ಬಳಸಿಕೊಂಡು ಸೌರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಸೌರ ವಿದ್ಯುತ್ ಪರಿಸರವನ್ನು ಸ್ವಚ್ಛವಾಗಿಡುವ ಜೊತೆಗೆ ವಿದ್ಯುತ್ ಬಿಲ್ ಉಳಿಕೆಗೂ ನೆರವಾಗಲಿದೆ ಎಂದರು.

ಮನೆಯ ಮೇಲೆ ಇರುವ ಜಾಗದಲ್ಲಿಯೇ ನಿಮಗೆ ಬೇಕಾದಷ್ಟು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ. ಸರ್ಕಾರ ಕೂಡ ಸಹಾಯಧನ ನೀಡುವ ಮೂಲಕ ಉತ್ತೇಜನ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಸೋಲಾರ್ ವಿದ್ಯುತ್ ಉತ್ಪಾದನೆಯಿಂದ ದೇಶದ ವಿದ್ಯುತ್ ಕೊರತೆಯನ್ನು ನೀಗಿಸಲು ಸಾಧ್ಯವಿದೆ. ಪ್ರತಿ ಮನೆಗಳಲ್ಲೂ ಸೋಲಾರ್ ಅಳವಡಿಕೆಗೆ ಅವಕಾಶವಿರುತ್ತೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಸೌರಶಕ್ತಿಯನ್ನು ಪ್ರತಿ ಮನೆಯಲ್ಲಿ ಬಳಸುವ ಮೂಲಕ ಸ್ವಾವಲಂಬನೆ ಸಾಧಿಸಬಹುದು ಎಂದು ಹೇಳುವ ಮೂಲಕ ಸೋಲಾರ ಬಳಕೆಯ ಸಂಪೂರ್ಣ ಮಾಹಿತಿ ನೀಡಿದರು.

ಸೋಲಾರ ಬಳಕೆಯ ಬಗ್ಗೆ ಕೆಲವು ನಿರ್ವಹಣೆಯ ನಿಯಮಗಳಿವೆ. ಸೌರಶಕ್ತಿಯ ಅಳವಡಿಕೆ ಕುರಿತು ಹಾಜರಿದ್ದ ಅನೇಕ ಗಣ್ಯರು ತಮ್ಮಲ್ಲಿ ಮೂಡಿದ ಸಂಶಯಗಳನ್ನು ಬಗೆಹರಿಸಿಕೊಂಡರು.

ಚಿತ್ರದುರ್ಗ ಸೆಲ್ಮೋ ಸೋಲಾರ್ ಪ್ರೈ.ಲಿ. ಹಿರಿಯ ವ್ಯವಸ್ಥಾಪಕ ಮಂಜುನಾಥ್ ಭಾಗವತ್ ಸೋಲಾರ್ ಬಳಕೆ ಕುರಿತು ಮಾಹಿತಿ ನೀಡಿದರು.

ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಂಸ್ಥಾಪಕ ಶಿವನಕೆರೆ ಬಸವಲಿಂಗಪ್ಪ, ಉದಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!