‘ನಿಮ್ಮನ್ನು ನೀವು ನಂಬಿದರೆ ಮಾತ್ರ ಜೀವನದಲ್ಲಿ ಯಶಸ್ಸು’

‘ನಿಮ್ಮನ್ನು ನೀವು ನಂಬಿದರೆ ಮಾತ್ರ ಜೀವನದಲ್ಲಿ ಯಶಸ್ಸು’

ಪದವಿ ಪ್ರದಾನ ಸಮಾರಂಭದಲ್ಲಿ ಜಿ.ಎಂ ವಿವಿ ಕುಲಪತಿ ಡಾ.ಶಂಕಪಾಲ್ ಕಿವಿಮಾತು

ದಾವಣಗೆರೆ, ನ.9- ಪ್ರತಿಭಾವಂತ ಪದವೀಧರರಿಗೆ ಹಲವಾರು ಅವಕಾಶಗಳಿವೆ. ನಿಮ್ಮನ್ನು ನೀವು ನಂಬಿ ಮುಂದೆ ಸಾಗಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು   ಜಿ.ಎಂ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್. ಆರ್. ಶಂಕಪಾಲ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಜರುಗಿದ 5 ಮತ್ತು 6ನೇ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿ ಗಳಾಗಿ ಆಗಮಿಸಿ, ಅವರು ಮಾತನಾಡಿದರು. 

ಶೈಕ್ಷಣಿಕ  ಪದವಿ ಪಡೆದು ವಿದ್ಯಾರ್ಥಿ ಜೀವ ನದಿಂದ ನಿಜವಾದ ಜೀವನಕ್ಕೆ ಕಾಲಿಟ್ಟಿರುವ ನಿಮಗೆ ನಿಜವಾದ ಸವಾಲುಗಳು ಈಗ ಎದುರಾ ಗುತ್ತವೆ. ನಿಮ್ಮ ಜೀವನವನ್ನು ನೀವೇ ರೂಪಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. 

ಮತ್ತೋರ್ವ ಅತಿಥಿ ವಿ.ಟಿ.ಯು, ಬೆಳಗಾಂ ವಿಶೇಷ ಅಧಿಕಾರಿ  ಡಾ. ವಿರುಪಾಕ್ಷಪ್ಪ ಎಸ್. ಬೆಟಗೇರಿ  ಮಾತನಾಡಿ,  ವಿದ್ಯಾರ್ಥಿ ದೆಸೆಯಿಂದ ಜೀವನದ ವ್ಯತ್ಯಾಸ, ಏರಿಳಿತಗಳು, ಸಂಶೋಧನೆ ಆವಿಷ್ಕಾರ ಇದ್ದರೆ ಫಲ ದೊರೆಯುವುದನ್ನು ಕಾಣಬಹುದು. ಮಾನವೀಯತೆ ಮುಖ್ಯವಾಗಿರಬೇಕು ಎಂದು ತಿಳಿಸಿದರು.

 ಚೇತನ ಬಿಸಿನೆಸ್ ಸ್ಕೂಲ್,  ಎಂ.ಬಿ.ಎ ನಿರ್ದೇಶಕ  ಡಾ. ವಿಶ್ವನಾಥ ಕೋರಿ ಮಾತನಾಡಿ, ಈಗ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಬ್ಯಾಂಕ್‍ನಲ್ಲಿ ಕೆಲಸ ಪಡೆಯಲು ಮುಂದಾಗಿದ್ದಾರೆ. ಇದರಿಂದ ನಿರುದ್ಯೋಗ ಸಮಸ್ಯೆ ಕಾರ್ಪೊರೇಟ್ ಜಗತ್ತಿನಲ್ಲಿ ಮತ್ತು ಕೈಗಾರಿಕಾ ಜಗತ್ತಿನಲ್ಲಿ ಕಂಡುಬರುತ್ತಿದೆ ಎಂದರು.

ಧಾರವಾಡದ ಎಸ್.ಡಿ.ಎಮ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜ್‌ನ  ಎಐ ಮತ್ತು ಎಮ್‍ಎಲ್ ವಿಭಾಗದ   ಡಾ. ಲೀನಾ ಸಕ್ರಿ   ಇವರು ಮಾತನಾಡಿ ಎಲ್ಲರ ಯೋಜನೆಗಳು ಬೇರೆ ಬೇರೆ. ಕಲಿಕೆ ಎನ್ನುವುದು ನಿರಂತರ ಕ್ರಿಯೆ. ಜ್ಞಾನ, ವಿದ್ಯೆ, ಕನಸು, ಉದ್ದೇಶ, ವೈಯಕ್ತಿಕ ಮೌಲ್ಯ, ಮಾನವೀಯ ಮೌಲ್ಯ ಉಳಿಯಬೇಕು ಮತ್ತು ಮಾರುಕಟ್ಟೆ, ಉದ್ಯೋಗ, ಕೈಗಾರಿಕಾ ಕ್ಷೇತ್ರದಲ್ಲಿ ಕೌಶಲ್ಯಕ್ಕೆ ಬೆಲೆ ಹೆಚ್ಚು ಎಂದು ತಿಳಿಸಿದರು. 

ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಶ್ವೇತ ಮರಿಗೌಡರ್  2021-22 ಹಾಗೂ 2022-23ನೇ ಸಾಲಿನ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ  ಬೋಧಿಸಿದರು. 

ರಾಂಕ್ ಪಡೆದ ವಿದ್ಯಾರ್ಥಿಗಳಾದ   ಪ್ರಸಾದ್ ವಿ. ಕಾಮತ್,  ಹರ್ಷಿತಾ ಪಿ,  ಹರ್ಷಿತಾ ಡಿ.ಎಂ,  ಅಂಜುಮ್ ಭಾನು, ಪಿ. ಅಶ್ವಿನಿ ಇವರನ್ನು ಕಾಲೇಜಿನ ವತಿಯಿಂದ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. 

ಪ್ರೊ.ಎಂ. ಸಚಿನ್  ವರದಿ ವಾಚಿಸಿದರು.   ಪ್ರೊ. ಲಿನೆಟ್ ಜಾನ್ ಮತ್ತು   ಡಾ. ರೂಪ. ಎಂ.ವಿ.  ನಿರೂಪಣೆ ಮಾಡಿದರು.   ಡಾ. ಶ್ವೇತಾ ಹೆಚ್. ಎಸ್ ವಂದಿಸಿದರು.

error: Content is protected !!