ಜೇಮಿ ಬೆರಳ ತುದಿಯಲ್ಲಿ ಬುಗುರಿಯಾದ ಫುಟ್‌ಬಾಲ್!

ಜೇಮಿ ಬೆರಳ ತುದಿಯಲ್ಲಿ ಬುಗುರಿಯಾದ ಫುಟ್‌ಬಾಲ್!

ಪೋದಾರ್ ಶಾಲೆಯಲ್ಲಿ ಫ್ರೀಸ್ಟೈಲ್ ಫುಟ್‌ಬಾಲ್ ಪ್ರದರ್ಶಿಸಿದ ಅಂತರರಾಷ್ಟ್ರೀಯ ಕ್ರೀಡಾಪಟು ಜೇಮಿ ನೈಟ್‌

ದಾವಣಗೆರೆ, ನ. 6 – ಅಂತರರಾಷ್ಟ್ರೀಯ ಕ್ರೀಡಾಪಟು ಜೇಮಿ ನೈಟ್ ಅವರು ಸೋಮವಾರ ನಗರದ ಪೋದಾರ್ ಅಂತರರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಿಗೆ  ಫ್ರೀಸ್ಟೈಲ್ ಫುಟ್‌ಬಾಲ್ ತರಬೇತಿ ನೀಡಿದರು.

ಏಳು ತಂಡಗಳಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜೇಮಿ ಅವರು ಫ್ರೀಸ್ಟೈಲ್ ಫುಟ್‌ಬಾಲ್ ಕೌಶಲ್ಯ ಪ್ರದರ್ಶಿಸಿದರಲ್ಲದೇ, ಈ ಕ್ರೀಡೆ ಕಲಿಯಲು ಮಾರ್ಗದರ್ಶನ ಮಾಡಿದರು. 

ತೋರು ಬೆರಳಿನ ಮೇಲೆ ಫುಟ್‌ಬಾಲ್ ಅನ್ನು ಗಿರಗಿಟ್ಟಲೆಯಂತೆ ತಿರುಗಿಸುವ, ಕಾಲ್ಚೆಂಡನ್ನು ತಲೆಯ ಮೇಲೆ ಬ್ಯಾಲೆನ್ಸ್ ಮಾಡುವುದು, ಕಾಲಿನಿಂದ ಫುಟ್‌ಬಾಲ್ ಮೇಲೆ ತೂರಿ ಹೆಗಲ ಮೇಲೆ ಕೂರಿಸಿಕೊಳ್ಳುವುದೂ ಸೇರಿದಂತೆ ಸುಮಾರು ಹತ್ತು ಫ್ರೀಸ್ಟೈಲ್ ಶೈಲಿಗಳನ್ನು ಜೇಮಿ ಪ್ರದರ್ಶಿಸಿ ವಿದ್ಯಾರ್ಥಿಗಳನ್ನು ಮಂತ್ರಮುಗ್ಧಗೊಳಿಸಿದರು.

ಪುಟ್ಟ ಬಾಲಕಿಯ ಬೆರಳಿನ ಮೇಲೂ ಫುಟ್‌ಬಾಲ್ ಅನ್ನು ಬುಗುರಿಯಂತೆ ತಿರುಗಿಸು ವಂತೆ ಮಾಡಿದ ಜೇಮಿ, ಈ ಕಲೆ ಎಲ್ಲರೂ ಕರಗತಗೊಳಿಸಿಕೊಳ್ಳಬಹುದು. ಫ್ರೀಸ್ಟೈಲ್ ಫುಟ್‌ಬಾಲ್ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದು ತಿಳಿಸಿದರು.

ಈಗಿನ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗ ದರ್ಶನ ದೊರೆತಲ್ಲಿ ಅತ್ಯಲ್ಪ ಅವಧಿಯಲ್ಲಿ ಫ್ರೀಸ್ಟೈಲ್‌ನಲ್ಲಿ ಪರಿಣಿತರಾಗಬಹುದು ಎಂದ ಅವರು, ಫುಟ್ಬಾಲ್‍ನಲ್ಲಿ ಭಾರತ ಜಾಗತಿಕ ಶಕ್ತಿಯಾಗಲು ಎಲ್ಲ ಅವಕಾಶಗಳಿವೆ. ಶೀಘ್ರ ದಲ್ಲಿಯೇ ಭಾರತವು ಫುಟ್ಬಾಲ್ ವಿಶ್ವಕಪ್‍ನಲ್ಲಿ ಸ್ಪರ್ಧಿಸುವ ದಿನಗಳು ಬರಲಿವೆ ಎಂದೂ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲೆ ಪಲಕುರಿ ರೇವತಿ, ಪೋದಾರ್ ಇಂಟರ್‌ನ್ಯಾಷನಲ್ ಸಮೂಹದ ಮಹಾರಾಷ್ಟ್ರ ಹಾಗೂ ಕರ್ನಾಟಕದ ಶಾಲೆಗಳಲ್ಲಿ ಜೇಮಿ ನೈಟ್ ಅವರು ಈ ಕೌಶಲ್ಯವನ್ನು ಕಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಕಷ್ಟು ಉತ್ಸಾಹ ತೋರಿದ್ದಾರೆ ಎಂದು ಹೇಳಿದರು.

ಪೋದಾರ್ ಶಾಲೆಯ ಅಧಿಕಾರಿ ಸ್ಯಾಮ್ಸನ್ ರಾಯ್ ಮಾತನಾಡಿ, ಮುಂದಿನ ದಿನಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಫ್ರೀಸ್ಟೈಲ್ ಕಲಿಸಲಾಗುವುದು ಎಂದು ಹೇಳಿದರು.ವ ಈ ಸಂದರ್ಭದಲ್ಲಿ ಶಾಲಾ ಸಮೂಹದ ಕೌಶಲ್ಯ ಅಭಿವೃದ್ಧಿ ತಂಡದ ಜ್ಯೋತಿ ಗಾಲಾ ಉಪಸ್ಥಿತರಿದ್ದರು.

Click here to change this text

error: Content is protected !!