ಸಾಣೇಹಳ್ಳಿಯ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ

ಸಾಣೇಹಳ್ಳಿಯ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ

ಸಾಣೇಹಳ್ಳಿಯ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ

ಸಾಣೇಹಳ್ಳಿ, ನ. 2-   ಕನ್ನಡ ರಾಜ್ಯೋತ್ಸವ ಒಂದು ದಿನದ ಹಬ್ಬವಾಗಬಾರದು, ಅದು ನಿರಂತರ ಹಬ್ಬವಾಗಬೇಕು. ಕನ್ನಡ ರಾಜ್ಯೋತ್ಸವದ ದಿನ ಕನ್ನಡದ ಹಾಡುಗಳನ್ನು ಹೇಳಿದರೆ, ಕೇಳಿದರೆ ಕನ್ನಡ ರಾಜ್ಯೋತ್ಸವ ಆಗೋದಿಲ್ಲ. ಕನ್ನಡಕ್ಕೆ ತನ್ನದೇ ಆದ ಶಕ್ತಿ ಇದೆ. ಧರ್ಮ, ಸುಸಂಸ್ಕೃತಿ ಇದೆ. ನಾವೆಲ್ಲ ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡ ಮರೆತಿದ್ದೇವೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಶ್ರೀಮಠದಲ್ಲಿ ನಡೆದ ತಿಂಗಳ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ,  ಅವರು ಮಾತನಾಡಿದರು.

ನಡೆ ಕನ್ನಡ, ನುಡಿ ಕನ್ನಡ, ಭಾವ ಕನ್ನಡ, ಬದುಕು ಕನ್ನಡ ಆಗಬೇಕು. ಕನ್ನಡ ಎಂದರೆ ಅದೊಂದು ಸಂಸ್ಕೃತಿ. ಕನ್ನಡ ಎನ್ನುತ್ತಲೇ ನೆನಪಾಗುವುದು ಪಂಪನಿಂದ ಕುವೆಂಪುವರೆಗೆ. ಶರಣರು, ದಾಸರು, ಅನುಭಾವಿಗಳು ಕನ್ನಡದ ಆಸ್ತಿ. ಅವರು ಬಿಟ್ಟುಹೋಗಿರುವ ಆಸ್ತಿಯನ್ನು ಉಳಿಸಿಕೊಂಡಾಗ ಮಾತ್ರ ಅಪ್ಪಟ ಕನ್ನಡಿಗ ರಾಗಲಿಕ್ಕೆ ಸಾಧ್ಯ ಎಂದು ಅವರು ನುಡಿದರು.

ಮನುಷ್ಯನಿಗೆ ನರ ಜನ್ಮ ಮತ್ತು ಹರ ಜನ್ಮ ಎನ್ನುವ ಎರಡು ಜನ್ಮಗಳಿವೆ. ತಂದೆ, ತಾಯಿಯಿಂದ ಬಂದದ್ದು ನರ ಜನ್ಮ, ಗುರುವಿನಿಂದ ಪಡೆದದ್ದು ಹರ ಜನ್ಮ. ಗುರುನಿಂದ ದೀಕ್ಷೆ ಮೂಲಕ ಅರಿವನ್ನು  ಪಡೆದುಕೊಂಡಾಗ ಹೆಚ್ಚಿನ ಸಾಧನೆ ಮಾಡಲಿಕ್ಕೆ ಸಾಧ್ಯ. ಮನುಷ್ಯನಿಗೆ ಕಾಮನೆಗಳನ್ನು ದೂರ ಮಾಡಿಕೊಳ್ಳಬೇಕಾದರೆ ನರಜನ್ಮ ತೊಡೆದು ಹರ ಜನ್ಮ ಪಡೆದುಕೊಳ್ಳಬೇಕು. ದೀಕ್ಷೆ ಪಡೆದುಕೊಳ್ಳುವುದು ಪುಣ್ಯದ ಕಾರ್ಯ.  

ದೀಕ್ಷೆ ಎಂದರೆ ಬದ್ಧತೆ, ಪ್ರಮಾಣ. ದೀಯತೆ ಮತ್ತು ಕ್ಷೀಯತೆ. ದೀಯತೆ ಎಂದರೆ ಕೊಡುವುದು ಕ್ಷೀಯತೆ ಎಂದರೆ ಕಳೆಯುವುದು. ಶರಣರು ಹೇಳಿದ್ದು ದೇವರೆಂದರೆ ನೀವು. ಪ್ರತಿ ಯೊಬ್ಬರು ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಳ್ಳಬೇಕು. ಅರಿವನ್ನು ಮೂಡಿಸುವುದು ಜ್ಞಾನ ದೀಕ್ಷೆ. ದೀಕ್ಷೆ ಪಡೆದವರು ಸೋಮಾರಿತನ ಬೆಳೆಸಿಕೊಳ್ಳದೇ ಸದಾ ಚಟುವಟಿಕೆಯಿಂದಿರಬೇಕು. 

ಇವತ್ತು ನಿಮ್ಮನ್ನು ಪೂಜಾರಿ ಪುರೋಹಿತರು ದಿಕ್ಕು ತಪ್ಪಿಸುವ ಕಾರ್ಯ ಮಾಡುವರು. ಎಂತೆಂಥದ್ದೋ ಗೊಂಬೆಯನ್ನು ತಂದು ಹೋಮ-ಹವನ ಮಾಡಿ ಆಡಂಬರದ ಪೂಜೆ ಮಾಡಿಸಿ ನಿಮ್ಮನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡಿ ಮೌಢ್ಯಗಳನ್ನು ಬಿತ್ತುತ್ತಿದ್ದಾರೆ. ಅದು ನಿಮ್ಮ ಉದ್ಧಾರಕ್ಕಾಗಿ ಅಲ್ಲ, ಪೂಜಾರಿ ಪುರೋಹಿತರ ಸ್ವಾರ್ಥಕ್ಕಾಗಿ ಎಂದರು. 

ನಿವೃತ್ತ ಪ್ರಾಚಾರ್ಯ ಐ .ಜಿ. ಚಂದ್ರಶೇಖರಯ್ಯ ಇಷ್ಟಲಿಂಗ ದೀಕ್ಷೆಯನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಸುಮಂತ್ ಪೂಜೆ  ವ್ಯವಸ್ಥೆ  ಮಾಡಿದರು.

error: Content is protected !!