ಕ್ವಾರ್ಟರ್ ಹಂತಕ್ಕೆ ಮನೀಶ್, ಮಾಧ್ವಿನ್

ಕ್ವಾರ್ಟರ್ ಹಂತಕ್ಕೆ ಮನೀಶ್, ಮಾಧ್ವಿನ್

ಅಂತರರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಯಲ್ಲಿ ಶ್ರೇಯಾಂಕಿತ ಆಟಗಾರರ ಪತನ

ದಾವಣಗೆರೆ, ಅ. 26 – ಇಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಯಲ್ಲಿ ಗುರುವಾರ ಶ್ರೇಯಾಂಕಿತ ಆಟಗಾರರು ಮುಗ್ಗರಿಸಿದ್ದಾರೆ. ಭಾರತದ ಮನೀಶ್ ಸುರೇಶ್‌ಕುಮಾರ್ ಹಾಗೂ ಮಾಧ್ವಿನ್ ಕಾಮತ್ ಅವರು ಗೆಲುವಿನೊಂದಿಗೆ ಕ್ವಾರ್ಟರ್‌ಫೈನಲ್ ಹಂತಕ್ಕೆ ದಾಪುಗಾಲು ಹಾಕಿದ್ದಾರೆ.

ದಾವಣಗೆರೆ ಟೆನ್ನಿಸ್ ಒಕ್ಕೂಟದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿ ಗುರುವಾರ ತೀವ್ರ ಬಿರುಸಿನ ಪಂದ್ಯಗಳಿಗೆ ಸಾಕ್ಷಿಯಾಯಿತು.

24 ವರ್ಷದ ಮನೀಶ್ ಅವರು ಮೂರನೇ ಶ್ರೇಯಾಂಕಿತ ದಿಗ್ವಿಜಯ್ ಪ್ರತಾಪ್ ಸಿಂಗ್ ವಿರುದ್ಧ 7-6 (5), 7-6 (2) ಅಂತರದ ನಿಕಟ ಹೋರಾಟದ ಗೆಲುವು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಮಾಧ್ವಿನ್ ಅವರು ನಾಲ್ಕನೇ ಶ್ರೇಯಾಂಕಿತ ಫ್ರಾನ್ಸ್‌ನ ಫ್ಲೊರೆಂಟ್ ಬ್ಯಾಕ್ಸ್ ವಿರುದ್ಧ 7-6 (4), 6-7 (4), 6-4 ಅಂತರದ ಗೆಲುವು ಕಂಡರು. ಈ ಸೆಣಸಾಟ ಮೂರು ಗಂಟೆ ಹಾಗೂ 13 ನಿಮಿಷಗಳಷ್ಟು ಸುದೀರ್ಘವಾಗಿತ್ತು.

ಮತ್ತೊಂದು ಪಂದ್ಯದಲ್ಲಿ ಕರಣ್ ಸಿಂಗ್ ಅವರು ಆರನೇ ಶ್ರೇಯಾಂಕಿತ ಎಸ್.ಡಿ. ಪ್ರಜ್ವಲ್ ದೇವ್ ಅವರ ವಿರುದ್ಧ  6-1, 6-4ರ ಅಂತರದ ಗೆಲುವು ಸಾಧಿಸಿದರು. ರಾಮ ಕುಮಾರ್ ರಾಮನಾಥನ್ ಅವರು ಏಳನೇ ಶ್ರೇಯಾಂಕಿತ ರಿಷಬ್ ಅಗರ್‌ವಾಲ್ ವಿರುದ್ಧ 6-0, 6-3 ಅಂತರದ ಗೆಲುವು ಕಂಡರು.

ಫ್ಲೊರೆಂಟ್ ಬ್ಯಾಕ್ಸ್ ಅವರು ಒಂಭತ್ತು ದಿನಗಳ ಹಿಂದೆ ನಡೆದ ಅಹಮದಾಬಾದ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ದ್ದರು. ಆದರೆ, ಮಾಜಿ ಜ್ಯೂನಿಯರ್ ನ್ಯಾಷನಲ್ ಚಾಂಪಿ ಯನ್ ಮಾಧ್ವಿನ್ ಅವರು ದಿಟ್ಟ ಹೋರಾಟ ತೋರಿ ಗೆಲುವು ತಮ್ಮದಾಗಿಸಿಕೊಂಡರು. 21 ವರ್ಷದ ಮಾಧ್ವಿನ್ ಮಂಗ ಳೂರು ಮೂಲದವರಾಗಿದ್ದರೂ, ಪ್ರಸಕ್ತ ಗುಜರಾತ್‌ನಲ್ಲಿದ್ದಾರೆ. 

error: Content is protected !!