`ಬುದ್ಧನ ಬೆಳಕು’ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಸಾಣೇಹಳ್ಳಿ ಶ್ರೀಗಳ ಪ್ರತಿಪಾದನೆ
ದಾವಣಗೆರೆ, ಆ.4- ನಾಮ್ಮ ನಾಡಿನಲ್ಲಿ ಮಾತಿಗೆ ಬರ ಇಲ್ಲ. ಕೃತಿಗೆ ಬರ ಇದೆ. ಮಾನವ ಬಂಧುತ್ವ ವೇದಿಕೆ ಹೊಸ ಪರಂಪರೆ ಹಾಕಿಕೊ ಟ್ಟಿದೆ. ಕಡಿಮೆ ಮಾತು ಹೆಚ್ಚು ಕೃತಿ. ಎಲ್ಲಾ ಸಂತರು, ಸಾಧುಗಳು ಹೇಳುತ್ತಾ ಬಂದಿದ್ದೆ ಮಾತು ಕಡಿಮೆ ಆಗಲಿ, ಕೃತಿ ಹೆಚ್ಚಾಗಲಿ ಎಂದು. ಅದರಲ್ಲು ಬುದ್ದ ಮಾತನ್ನೇ ಹೆಚ್ಚು ಆಡಿದ್ದರೂ ಮಾತಿನ ಮೂಲಕ ಮನಸ್ಸನ್ನು ಅರಳಿಸುವಂತಹ ಕಾರ್ಯವನ್ನು ಮಾಡಿದ ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಬಿಐಇಟಿ ಕಾಲೇಜಿನ ಆವರಣ ದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃ ತಿಕ ಭವನದಲ್ಲಿ ಜಾರಕಿಹೊಳಿ ಫೌಂಡೇಶನ್ ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ಇಂದು ಸಂಜೆ ಹಮ್ಮಿಕೊಂಡಿದ್ದ `ಬುದ್ದನ ಬೆಳಕು’ ನಾಟಕ ಪ್ರದರ್ಶನ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ನಾವು ಎಷ್ಟು ಒಳ್ಳೆಯ ಮಾತನ್ನು ಹೇಳುತ್ತೇವೆ ಎನ್ನುವುದು ಮುಖ್ಯವಲ್ಲ. ಆಡಿದ ಮಾತನ್ನು ನಮ್ಮ ಬದುಕಿನಲ್ಲಿ ಸಾಕಾರಗೊಳಿಸಿಕೊಳ್ಳುತ್ತೇವೆ ಎನ್ನುವಂತಹದ್ದು, ಈ ನಾಡಿನಲ್ಲಿ ಮಾತಿಗೇನು ಕೊರತೆ ಇಲ್ಲ. ಹಿತವಾದ, ಅದ್ಭುತವಾದ ಎಲ್ಲರೂ ಚಪ್ಪಾಳೆ ತಟ್ಟುವಂತಹ ಮಾತುಗಳನ್ನು ಸ್ವಾಮಿಗಳು, ಸಾಹಿತಿಗಳು, ರಾಜಕಾರಣಿಗಳು ಆಡುತ್ತಾರೆ. ಆದರೆ ಆ ಮಾತುಗಳಿಗೆ ಅನುಗುಣವಾದ ವರ್ತನೆ ಇದೆಯಾ ಅಂಥ ಪ್ರಶ್ನೆ ಹಾಕಿದರೆ, ಇಲ್ಲ ಎಂಬ ಉತ್ತರನೇ ಬರುತ್ತದೆ. ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಹೊಸ ಪರಂಪರೆ ಹಾಕುವ ಪ್ರಯತ್ನ ಮಾಡುತ್ತಿದೆ ಎಂದರು.
ಜಾರಕಿಹೊಳಿ ಸ್ಮಶಾನದಲ್ಲೇ ಅಪರೂಪದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿ ದ್ದಾರೆ. ಅಲ್ಲಿ ಸಾಹಿತ್ಯ, ಸಂಗೀತ, ಕಲೆಗಳ ರಸದೌ ತಣ ಇರುತ್ತದೆ. ಮನುಷ್ಯನಿಗೆ ಒಂದು ಕಡೆ ಸಾವು, ಒಂದು ಕಡೆ ಬದುಕು, ಇನ್ನೊಂದು ಕಡೆ ಆದರ್ಶ. ಇವುಗಳ ನೆಲೆಯಲ್ಲಿ ಸಂಸ್ಥೆ ಉತ್ತಮ ಕಾರ್ಯಗ ಳನ್ನು ಮಾಡುತ್ತಾ ಬಂದಿದ್ದು, ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಕಲಾವಿದರನ್ನು ಕಲೆ ಹಾಕಿ, ತರಬೇತಿ ನೀಡಿ ಕಲೆಯ ಮೂಲಕ ಕ್ರಾಂತಿಯನ್ನು ಮಾಡುವುದು. ಬೇರೆ ಬೇರೆ ರೀತಿಯ ಕ್ರಾಂತಿಗಳು ನಡೆದಿವೆ. ಆದರೆ ಆ ಕ್ರಾಂತಿಗಳು ಕಳೆಯನ್ನು ಕಳೆದುಕೊಂಡಿವೆ ಎಂದು ಹೇಳಿದರು.
ಕ್ರಾಂತಿಯನ್ನು ಮಾಡುವ ಜನರಲ್ಲಿ ಬದ್ಧತೆ ಇಲ್ಲದಿರುವುದು. ಮನುಷ್ಯನಿಗೆ ಬೇಕಾಗಿರುವುದು ಬದ್ಧತೆ, ಬದ್ದತೆ ಇಲ್ಲದೇ ಏನನ್ನೂ ಕೂಡ ಮಾಡಲಾಗದು. ಈ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ಬದ್ಧತೆಯೊಂದಿಗೆ ಹೆಜ್ಚೆಗಳನ್ನು ಇಡುತ್ತಿದೆ. `ಬುದ್ಧನ ಬೆಳಕು’ ಎನ್ನುವ ಅಪರೂಪದ ನಾಟಕ ಆಯ್ಕೆ ಮಾಡಿಕೊಂಡಿದ್ದಾರೆ. ಬುದ್ದ ತನಗೆ ತಾನೇ ಬೆಳಕಾದವನು. ತನ್ಮೂಲಕ ಲೋಕಕ್ಕೆ ಬೆಳಕಾದ ವನು. ಹಾಗಾಗಿ ಬುದ್ಧನನ್ನು ಏಷ್ಯಾದ ಬೆಳಕು ಎಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.
ವಿಷಾದದ ಸಂಗತಿ ಎಂದರೆ, ಬುದ್ದ ಈ ನಾಡಿನಿಂದಲೇ ಹೋಗಿ ಬಿಟ್ಟ ಎಂಬುದು. ಬುದ್ಧನ ಅಸ್ತಿತ್ವ ಭಾರತಕ್ಕಿಂತ ಹೊರ ದೇಶದಲ್ಲಿ ಹೆಚ್ಚಾಗಿದೆ. ಬುದ್ಧನ ಬೆಳಕನ್ನು ಎಲ್ಲರೂ ಪಡೆದುಕೊಳ್ಳೋಣ, ನಾಟಕ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ರಂಗ ಪ್ರಯೋಗವನ್ನು ಮೊದಲ ಬಾರಿಗೆ ಮಾಡುತ್ತಿದ್ದು, ಸತೀಶ್ ಜಾರಕಿ ಹೊಳಿ ಫೌಂಡೇಶನ್ ಹಾಗೂ ಮಾನವ ಬಂಧುತ್ವ ವೇದಿಕೆ ಈ ಎರಡೂ ವೇದಿಕೆಗಳು ನಿರಂತರವಾಗಿ ಸ್ವಸ್ಥ ಸಮಾಜಕ್ಕೆ ಬೇಕಾದ ಚಿಂತನೆಗಳನ್ನು ಬೇರೆ ಬೇರೆ ಆಯಾಮದ ಮೂಲಕ ಬಿತ್ತುವ ಕೆಲಸ ಮಾಡುತ್ತಾ ಬರುತ್ತಿವೆ ಎಂದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬುದ್ಧ ನ ಚಿಂತನೆಗಳು ಪರಿಹಾರ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ರೀತಿ ಬುದ್ದನನ್ನು ಓದಿಕೊಂಡರೆ ಅವರ ಹಾಗೆಯೇ ನಡೆದುಕೊಂಡರೆ ಖಂಡಿತ ರಾಜಕೀಯ ಸಮಸ್ಯೆಗಳು, ಧರ್ಮ ಮತ್ತು ಜಾತಿಯ ಸಮಸ್ಯೆಗಳು ತನ್ನ ತಾನೇ ನಿವಾರಣೆ ಆಗುತ್ತವೆ ಎಂಬುದು ನನ್ನ ನಂಬಿಕೆ ಎಂದರು.
ಇವತ್ತು ಓದುವ ವ್ಯವಧಾನ, ಆಸಕ್ತಿ ಕಡಿಮೆಯಾಗಿದೆ. ಹೊರಗಿನ ಕಸವನ್ನು ಸ್ವಚ್ಛ ಮಾಡುತ್ತೇವೆ. ಆದರೆ ನಮ್ಮ ಮನಸ್ಸಿನ ಕಸವನ್ನು ಹೊರ ಹಾಕುತ್ತಿಲ್ಲ. ಶಾಂತಿಯೊಂದೇ ಎಲ್ಲದಕ್ಕೂ ಪರಿಹಾರ ಎಂಬುದು ಬುದ್ಧನ ಬೆಳಕು ನಾಟಕದ ಪ್ರಮುಖ ಅಂಶವಾಗಿದೆ ಎಂದು ಹೇಳಿದರು.
ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ಬುದ್ದನ ಬೆಳಕು ಎಂಬ ನಾಟಕದ ಹೆಸರೇ ರೋಚಕ ಮತ್ತು ಆಕರ್ಷಕವಾಗಿದೆ. ಇವತ್ತು ನಮ್ಮ ದೇಶವನ್ನು ಬೆಳೆಸಬೇಕು, ಉಳಿಸಬೇಕು. ಪ್ರವರ್ಧಮಾನಕ್ಕೆ ತರಬೇಕು ಅನ್ನುವುದಾದರೆ ಒಂದು ಮೂರ್ನಾಲ್ಕು ಜನರಿಂದ ಮಾತ್ರ ಸಾಧ್ಯ. ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್. ಇವರ ಚಿಂತನೆಗಳು ನಮಗೆ ಮಾರ್ಗದರ್ಶಕ ಎಂದರು.
ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಮಾತ ನಾಡಿದರು. ರಘು ದೊಡ್ಡಮನಿ ಸ್ವಾಗತಿಸಿದರು. ರವೀಂದ್ರ ನಾಯ್ಕರ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಅಂಜಿನಪ್ಪ ಕಾರ್ಯಕ್ರಮ ನಿರೂಪಿಸಿದರು.