ಕಾವೇರಿ ಬಂದ್‌ಗೆ ಹರಿಹರದಲ್ಲಿ ಉತ್ತಮ ಪ್ರತಿಕ್ರಿಯೆ

ಕಾವೇರಿ ಬಂದ್‌ಗೆ ಹರಿಹರದಲ್ಲಿ ಉತ್ತಮ ಪ್ರತಿಕ್ರಿಯೆ

ಹರಿಹರ, ಸೆ. 29 – ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ಆಗ್ರಹಿಸಿ ಕರೆ ನೀಡಲಾಗಿದ್ದ ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲವನ್ನು ನೀಡಿದರು.

ಬ್ಯಾಂಕ್ ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಆಟೋ, ಬಸ್ ಸಂಚಾರ ಆಸ್ಪತ್ರೆ, ಔಷಧಿ ಅಂಗಡಿ, ಹೂವಿನ ಅಂಗಡಿ ಎಂದಿನಂತೆ ಕಾರ್ಯ ನಿರ್ವಹಿಸಿದವು.

ಹೋಟೆಲ್, ಬೇಕರಿ, ಹಾರ್ಡ್‌ವೇರ್‌, ತರಕಾರಿ, ದಿನಸಿ ಪದಾರ್ಥ, ಬಾರ್, ಸ್ಟೇಷನರಿ, ಬಂಗಾರ, ಬಟ್ಟೆ ಗ್ಯಾರೇಜ್, ಆಟೋಮೊಬೈಲ್ ಸೇರಿದಂತೆ ಹಲವು ಅಂಗಡಿಗಳು ತಮ್ಮ ವ್ಯಾಪಾರ ವಹಿವಾಟು ನಡೆಸದೇ ಬಂದ್‌ಗೆ ಬೆಂಬಲ ನೀಡಿದವು. ಬಸ್ ಸಂಚಾರ ಇದ್ದರೂ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆ ಇತ್ತು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಯ ಕರ್ನಾಟಕ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ತು, ವಕೀಲರ ಸಂಘ, ಡಿ.ಎಸ್.ಎಸ್. ಸಂಘಟನೆ (ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಆಮ್ ಆದ್ಮಿ ಪಕ್ಷ, ವಕೀಲರ ಸಂಘ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಕರವೇ (ಹೆಚ್. ಶಿವರಾಮೇಗೌಡ ಬಣ) ಹರಿಹರ ವರ್ತಕರ ಸಂಘ, ಹರಿಹರ ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘ, ವಿಷ್ಣು ಸೇನಾ ಸಮಿತಿ, ಎಗ್ ರೈಸ್ ವ್ಯಾಪಾರಿಗಳ ಸಂಘ, ಹೂವಿನ ವ್ಯಾಪಾರಿಗಳ ಸಂಘ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಬಂದ್‌ನಲ್ಲಿ ಭಾಗವಹಿಸಿದ್ದರು.

ಸಂಘಟನೆಗಳಿಂದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಪಕ್ಕೀರಸ್ವಾಮಿ ಮಠದ ಮುಂಭಾಗದಿಂದ ಪ್ರಾರಂಭಗೊಂಡು ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯರಸ್ತೆ ಮೂಲಕ ಸಂಚರಿಸಿ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ಮನವಿ ಅರ್ಪಿಸಿದರು.

ಈ ವೇಳೆ ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ದೂಡಾ ಮಾಜಿ ಸದಸ್ಯ ಹೆಚ್.ನಿಜಗುಣ, ರಮೇಶ್ ಮಾನೆ, ಪ್ರೀತಂ ಬಾಬು, ಶ್ರೀನಿವಾಸ್, ಎಂ. ಚಿದಾನಂದ ಕಂಚಿಕೇರಿ, ಗೋವಿಂದ ಕೊಪ್ಪಳ ಮಂಜುನಾಥ್ ಮಾತ ನಾಡಿ, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ, ಕನ್ನಡ ರಕ್ಷಣಾ ವೇದಿಕೆಯ ರಮೇಶ್ ಮಾನೆ, ಪ್ರೀತಂ ಬಾಬು, ಎಂ. ಇಲಿಯಾಜ್ ಆಹ್ಮದ್, ಜಯ ಕರ್ನಾಟಕ ಸಂಘಟನೆಯ ಎಸ್. ಗೋವಿಂದ, ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ರುದ್ರಗೌಡ್ರು, ವಕೀಲರಾದ ಸಾಕಮ್ಮ, ಗಣೇಶ ಕೆ. ದುರ್ಗದ, ನಾಗರಾಜ್ ಎಂ. ಅಬ್ದುಲ್ ರೆಹಮಾನ್, ಮಾರುತಿ ಬೇಡರ್, ರಮೇಶ್, ಶಂಭುಲಿಂಗ ಪಾಟೀಲ್, ಹೆಚ್. ಭಾಗೀರಥಿ, ಡಿ.ಎಸ್.ಎಸ್. ಎ.ಕೆ. ಶ್ರೀನಿವಾಸ್, ಮಂಜುನಾಥ್ ಕೊಪ್ಪಳ, ಕೊಟ್ರೇಶ್, ಯಮನೂರು, ಸಿದ್ದಲಿಂಗಸ್ವಾಮಿ, ಪ್ರಭಾಕರ್, ರಘು, ದುರುಗೇಶ್, ಶಶಿನಾಯ್ಕ್, ವಿನಾಯಕ, ಆನಂದ್ ಎಂ.ಆರ್.ಶಬರೀಶ್, ಸುನೀಲ್, ವಿಜಯ್, ಶ್ರೀನಿವಾಸ್, ಶಂಕರ್ ದುರಗೋಜಿ, ಆಲಿ ಅಕ್ಬರ್, ರಾಮು ಸಂತೋಷ, ತಿಪ್ಪೇಶ್, ವಿನಯ್, ಗಿರೀಶ್, ಪ್ರಕಾಶ್, ಮಹದೇವಮ್ಮ, ಉಮೇಶ್ ಹುಲ್ಲಮನಿ, ಅರುಣ್ ಕುಮಾರ್ ಆಮ್ ಆದ್ಮಿ ಪಕ್ಷ ರಾಘವೇಂದ್ರ ಬಸವರಾಜ್ ಹಲಸಬಾಳು, ಕನ್ನಡ ಸಮರಸೇನೆ ಭಾಗ್ಯಮ್ಮ ಇತರರು ಹಾಜರಿದ್ದರು.

error: Content is protected !!