ದಾವಣಗೆರೆ, ಸೆ.6- ಶ್ರೀ ಕೃಷ್ಣ ಪರಮಾತ್ಮನಂತೆ ಬಹುಸ್ವರೂಪಿ, ಅಧ್ಯಾತ್ಮಿಕ, ಭಕ್ತಿ, ಜ್ಞಾನ ಹಾಗೂ ಚಾಣಾಕ್ಷತೆಯಲ್ಲಿ ಹೊಂದಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.
ಬುಧವಾರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ದಲ್ಲಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಯಾದವ ಸಮಾಜದವರು ವಾಸಿಸುವ 39 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದು, ಜಗಳೂರು ತಾಲ್ಲೂಕು ಒಂದರಲ್ಲಿಯೇ 19 ಕ್ಕಿಂತ ಹೆಚ್ಚು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳಿಗೆ ಮಹಾಭಾರತದ ಮಹಾಕಾವ್ಯ ದಲ್ಲಿನ ಇರುವ ಹೆಸರುಗಳನ್ನೇ ಗ್ರಾಮಗಳಿಗೆ ಇಡಲು ಪ್ರಯತ್ನಿಸಲಾಗುತ್ತದೆ. ಇದಲ್ಲದೇ ಬಾಕಿ ಉಳಿದ ಗ್ರಾಮಗಳನ್ನೂ ಸಹ ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುತ್ತದೆ. ಯಾದವ ಸಮುದಾಯ ಸೇರಿದಂತೆ ಧ್ವನಿ ಇಲ್ಲದ ಸಮು ದಾಯಗಳನ್ನು ಗಮನದಲ್ಲಿಸಿರಿ ಅವರ ಅಭಿ ವೃದ್ದಿಗೂ ಸಹಕರಿಒಸಲಾಗುತ್ತದೆ ಎಂದರು.
ಎಎಸ್ಪಿ ರಾಮಗೊಂಡ ಬಸರಗಿ, ಜಿ.ಪಂ ಉಪಕಾರ್ಯದರ್ಶಿ ಕೃಷ್ಣ ನಾಯ್ಕ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ, ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ. ರಮೇಶ್, ಕೌಶಲ್ಯಾಭಿವೃದ್ಧಿ ಉಪನಿರ್ದೇಶಕ ಬಸವನಗೌಡ, ಉಪಸ್ಥಿತರಿದ್ದರು.