ನಗರದ ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ನಗರದ ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದಾವಣಗೆರೆ, ಆ. 25- ನಗರದಲ್ಲಿ ವರಮಹಾಲಕ್ಷಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಬೆಳಗ್ಗೆ ಬೇಗ ಎದ್ದು ಮನೆಯ ಮುಂದೆ ರಂಗೋಲಿ ಹಾಕಿ, ದೇವರ ಕೋಣೆಯನ್ನು ಅಲಂಕರಿಸಿ, ವರ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿದರು.

ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿ ಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತದೆ. ಈ ವಿಶೇಷ ದಿನ ಮಹಾಲಕ್ಷ್ಮಿಯನ್ನು ಪೂಜಿಸಿದರೆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಅಷ್ಟೈಶ್ವರ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ, ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಪೂಜೆ ನಡೆದ ನಂತರ ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸಿ, ಪರಸ್ಪರ ಶುಭಾಶಯ ಕೋರಿ,  ಅರಿಷಿಣ-ಕುಂಕುಮದ ಜೊತೆ ಉಡಿ ಕೊಟ್ಟು  ಸಂಭ್ರಮಿಸಿದರು.

ಮನೆಗಳಲ್ಲಿ ಸಂಭ್ರಮ ಒಂದೆಡೆಯಾದರೆ, ದೇವಸ್ಥಾನಗಳಲ್ಲೂ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಾಲಯ, ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಚೌಡಮ್ಮನ ದೇವಸ್ಥಾನ ಸೇರಿದಂತೆ ದೇವತೆಗಳಿಗೆ ವಿಶೇಷ ಪೂಜೆ, ಅಲಂಕಾರಗಳು ನಡೆದವು. ವಿಶೇಷ ಅಲಂಕಾರದ ನಂತರ ಬರುವ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಸಾಮಾಜಿಕ ಜಾಲ ತಾಣಗಳಲ್ಲಿ ಮಹಿಳೆಯರ ಹವಾ:  ಫೇಸ್‌ಬುಕ್‌, ಇನ್‌ ಸ್ಟಾಗ್ರಾಂ, ವಾಟ್ಸಾಪ್‌ ಸ್ಟೇಟಸ್‌ ಇತ್ಯಾದಿ ಎಲ್ಲಿ ನೋಡಿದರೂ ಮಹಿಳೆಯರು ವರಮಹಾ ಲಕ್ಷ್ಮಿ ಹಬ್ಬದ ಸಂಭ್ರಮ ಹಂಚಿಕೊಂಡರು.

ಕೆಲವರು ವರಮಹಾಲಕ್ಷ್ಮಿ ದೇವಿಯ ಅಲಂಕಾರದ ಫೋಟೊಗಳನ್ನು ಹಂಚಿಕೊಂಡಿ ದ್ದಾರೆ. ಇನ್ನು ಕೆಲವರು ಸುಂದರ ಉಡುಗೆ ತೊಟ್ಟು ಹಬ್ಬದ ಸಿಹಿಯನ್ನು ತೋರಿಸಿ ಸಂಭ್ರಮಿಸಿದರು. ಶುಭ ಕೋರಿದರು.

error: Content is protected !!