ಚಂದ್ರಯಾನ-3 ಯಶಸ್ವಿ : ನಗರದಲ್ಲೆಡೆ ಸಂಭ್ರಮಾಚರಣೆ

ಚಂದ್ರಯಾನ-3 ಯಶಸ್ವಿ : ನಗರದಲ್ಲೆಡೆ ಸಂಭ್ರಮಾಚರಣೆ

ದಾವಣಗೆರೆ, ಆ. 23- ಚಂದಿರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಸುಸೂತ್ರವಾಗಿ ಲ್ಯಾಂಡ್ ಆಗಿದ್ದು, ದಕ್ಷಿಣ ಧ್ರುವ ಮುಟ್ಟಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಂದ್ರಯಾನ ಯಶಸ್ಸಿಯಾದ ಕಾರಣ ನಗರದ ಎಲ್ಲೆಡೆ ಸಂಭ್ರಮಾಚರಣೆ  ಮಾಡಲಾಯಿತು.

ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಕಕ್ಷೆ ಮೇಲೆ ಪಾದಾರ್ಪಣೆ ಮಾಡುವ ಕಾರ್ಯ ಯಶಸ್ಸಿಯಾಗಲೆಂದು ನಗರದ ವಿವಿಧ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಯಿತು.

ಕರಾವಿಪದಿಂದ ವಿಜಯೋತ್ಸವ: ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಕಾಲಿಟ್ಟ ಯಶಸ್ಸಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಲಾಯಿತು.

ಇದಕ್ಕೂ ಮುನ್ನ ವಿಕ್ರಮ್ ಲ್ಯಾಂಡರ್ ಚಂದಿರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವ ದೃಶ್ಯವನ್ನು ನೇರವಾಗಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. 

ಈ ಸಂದರ್ಭದಲ್ಲಿ ಕರಾವಿಪ ಪದಾಧಿಕಾರಿಗಳಾದ ಪ್ರೊ. ವೈ. ವೃಷಭೇಂದ್ರಪ್ಪ, ಡಾ. ಜೆ.ಬಿ. ರಾಜು, ಎಂ.ಟಿ. ಶರಣಪ್ಪ, ಎಂ. ಗುರುಸಿದ್ಧಸ್ವಾಮಿ, ಅಂಗಡಿ ಸಂಗಪ್ಪ, ಕೆ. ಸಿದ್ದೇಶ್, ಟಿ. ಸುರೇಶ್, ಡಾ.ಎಂ.ಆರ್. ಜಗದೀಶ್ ಮತ್ತಿತರರಿದ್ದರು.

ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ: ಭಾರತ ಐತಿಹಾಸಿಕ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸುವ ಮೂಲಕ ಜಿಲ್ಲಾ ಬಿಜೆಪಿ ಕಾರ್ಯಾಲಯ ಹಾಗೂ ಜಯದೇವ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸುವ ಮೂಲಕ ಸಂಭ್ರಮ ಆಚರಿಸಿದರು.

ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಸಿಹಿ ವಿತರಿಸಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. ಚಂದ್ರನ ಅಂಗಳದಲ್ಲಿ ಸೂಸೂತ್ರವಾಗಿ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಿದ್ದು, ಭಾರತದ ಕೋಟ್ಯಂತರ ಜನರ ಪ್ರಾರ್ಥನೆ ಸಫಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಉಪಾಧ್ಯಕ್ಷರಾದ ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮುಖಂಡರಾದ ಬಿ.ಜಿ. ರೇವಣಸಿದ್ಧಪ್ಪ, ಅಣಜಿ ಗುಡ್ಡೇಶ್, ಹನುಮಂತಪ್ಪ, ವಿಶ್ವಾಸ್, ಕೊಟ್ರೇಶ ಗೌಡ್ರು, ಸೋಗಿ ಶಾಂತಕುಮಾರ್,ಲಿಂಗರಾಜ್, ಗೌರಮ್ಮ ಪಾಟೀಲ್, ರೂಪಾ, ವೀರಯ್ಯ ಮತ್ತಿತರರಿದ್ದರು.

ಜಯದೇವ ವೃತ್ತದಲ್ಲಿ ಆಚರಿಸಲಾದ ಸಂಭ್ರಮಾಚರಣೆಯಲ್ಲಿ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಯಶವಂತರಾವ್ ಜಾಧವ್, ಜಗದೀಶ್, ಸತೀಶ್ ಪೂಜಾರಿ, ರಾಜಶೇಖರ್, ರೇವಣಸಿದ್ಧಪ್ಪ ಮತ್ತಿತರರು ಭಾಗವಹಿಸಿದ್ದರೆ, ಮತ್ತೊಂದೆಢೆ ಶಿವನಗೌಡ ಟಿ. ಪಾಟೀಲ್, ಮಹೇಂದ್ರ ಕೊಠಾರಿ, ಪ್ರವೀಣ್ ಜೈನ್, ಲಲಿತ್ ಜೈನ್, ಕಾಂತಿಲಾಲ್, ಆಟೋ ಶೇಖರ್ ಮುಂತಾದವರು ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.

ಫೋಟೋ ಮತ್ತು ವಿಡಿಯೋ ಗ್ರಾಫರ್ಸ್ ಸಂಘ : ವಿನೋಬನಗರದ ಎರಡನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ತಾಲ್ಲೂಕು ಫೋಟೋ ಮತ್ತು ವಿಡಿಯೋ ಗ್ರಾಫರ್ಸ್ ಸಂಘ, ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ, ಕನ್ನಡ ಸಮರ ಸೇನೆ ಸಹಯೋಗದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಎಂ. ಮನು, ಕೊಂಡಜ್ಜಿ ಎಸ್. ರಾಜಶೇಖರ್, ಎಸ್. ಚಂದ್ರಶೇಖರ್, ಮಲ್ಲೇಶ್ ಹೆಚ್. ಪಾಟೀಲ್, ಎ.ಎಸ್. ಗಣೇಶ್, ಸಂತೋಷ್ ದೊಡ್ಡಮನಿ, ದಾಕ್ಷಾಯಿಣಮ್ಮ  ಮಲ್ಲಿಕಾರ್ಜುನಯ್ಯ, ಕೊಟ್ಯಾಳ್ ಸಿದ್ದೇಶ್, ರಾಜೇಶ್ವರಿ, ಕವಿತಾ ಚಂದ್ರಶೇಖರ್, ಶ್ರವಣ್ ಕುಮಾರ್, ಹುಲಿಕಟ್ಟೆ ರಾಜೇಶ್, ರವಿ, ಡಿ. ರಂಗನಾಥ್, ದೇವೇಂದ್ರಪ್ಪ, ಕುಮಾರ್ ಮತ್ತಿತರರು ಭಾಗವಹಿಸಿದ್ದರು.

error: Content is protected !!