ಮನುಕುಲದ ಒಳಿತಿಗಾಗಿ ಉತ್ತಮ ಉದ್ದೇಶ ಇಟ್ಟುಕೊಂಡು ಕೆಲಸ ಮಾಡಿ

ಮನುಕುಲದ ಒಳಿತಿಗಾಗಿ ಉತ್ತಮ ಉದ್ದೇಶ ಇಟ್ಟುಕೊಂಡು ಕೆಲಸ ಮಾಡಿ

ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಡಾ. ಎಂ.ಆರ್.ಜಗದೀಶ್

ದಾವಣಗೆರೆ, ಜೂ.5- ಮನುಕುಲದ ಒಳಿತಿಗಾಗಿ ಉತ್ತಮ ಉದ್ದೇಶಗಳನ್ನು ಇಟ್ಟು ಕೊಂಡು ಕೆಲಸವನ್ನು ಮಾಡಬೇಕು ಎಂದು ಬಿಐಇಟಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಂ.ಆರ್.ಜಗದೀಶ್‌ ಕರೆ ನೀಡಿದರು.

ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ `ವಿಶ್ವ ಪರಿಸರ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿ   ಪಾಲ್ಗೊಂಡು ಅವರು ಮಾತನಾಡಿದರು.

ಪ್ಲಾಸ್ಟಿಕ್ ಬಳಕೆಯ ನಿಷೇಧ ಮತ್ತು ಅನಾನುಕೂಲಗಳ ಬಗ್ಗೆ ತಿಳಿಸಿದರು. `ಪ್ಲಾಸ್ಟಿಕ್ ಅನ್ನು ನಿಷೇಧಿಸಿ, ಗಿಡಗಳನ್ನು ಬೆಳೆಸಿ, ಪರಿಸರ ರಕ್ಷಿಸಿ’ ಕಿವಿಮಾತು ಹೇಳಿ ದರು. ಶಿಕ್ಷಕರಾದ ನಾವು, ಗಿಡಗಳ ಪರಿಕಲ್ಪನೆ ಯನ್ನು ಮಕ್ಕಳಿಗೆ ಮತ್ತು ಸಮಾಜಕ್ಕೆ ತಿಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಕೆ.ಎಸ್. ದಿವಾಕರ ನಾಯ್ಕ ಮಾತನಾಡಿ, ಈ ವರ್ಷದ ವಿಷಯವಾದ `ಬೀಟ್ ಪ್ಲಾಸ್ಟಿಕ್ ಪೊಲ್ಯೂಷನ್. ಇಕೋಸಿಸ್ಟಂ ರೆಸ್ಟೋರೇಷನ್’ ಎಂದು ತಿಳಿಸಿದರು. ನಮ್ಮ ಬದುಕು ಪರಿಸರದೊಂದಿಗೆ ನಡೆಯುತ್ತಿದೆ. ಅದರ ರಕ್ಷಣೆ ನಮ್ಮ ಹೊಣೆಯಾಗಿದೆ ಎಂದರು. ಪರಿಸರವನ್ನು ಹಾಳು ಮಾಡುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಪರಿಸರವನ್ನು ರಕ್ಷಿಸೋಣ ಎಂದು ಕರೆ ನೀಡಿದರು. 

ಪ್ರಶಿಕ್ಷಣಾರ್ಥಿ ಕು. ಕೆ.ಪಿ.ಸ್ನೇಹ ಪ್ರಾರ್ಥಿ ಸಿದರು. ಕು. ಪಿ.ಜಿ. ಐಶ್ವರ್ಯ ಅತಿಥಿಗಳನ್ನು ಸ್ವಾಗತಿಸಿದರು. ಕು. ಎಫ್.ಸುಹಾನಾ ಖಾನ್ ಅತಿಥಿಗಳ ಪರಿಚಯ ಮಾಡಿದರೆ, ಶ್ರೀಮತಿ ಎಸ್. ಸ್ಫೂರ್ತಿ ವಿಶ್ವ ಪರಿಸರ ದಿನಾಚರಣೆಯ ಕುರಿತು ಭಾಷಣ ಮಾಡಿದರು. 

ಕು. ಎಂ.ಪಿ.ಮಸಿಯಮ್ಮ ಮತ್ತು ಕು. ಎಂ.ಎಂ.ರಕ್ಷಿತಾ ಪರಿಸರ ಕುರಿತು ಗೀತ ಗಾಯನ ಮಾಡಿದರು. ಕು. ನಿಷಾದ್ ಬಾನು ವಂದಿಸಿದರೆ, ಕು. ಕೆ. ರಂಜಿತಾ ಕಾರ್ಯಕ್ರಮ ನಿರೂಪಿಸಿದರು.

error: Content is protected !!