ದಾವಣಗೆರೆ, ಮೇ 20- ಸರ್ಕಾರ 2 ಸಾವಿರ ರೂ. ಮುಖಬೆಲೆಯ ನೋಟು ವಾಪಸ್ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದು, ಗ್ರಾಹಕರು ತಮ್ಮ ಬಳಿಯ ನೋಟುಗಳನ್ನು ಪೆಟ್ರೋಲ್ ಬಂಕ್ಗಳಿಗೆ ಹೆಚ್ಚಾಗಿ ನೀಡಲು ಆರಂಭಿಸಿದ್ದಾರೆ.
ತಮ್ಮ ವಾಹನಗಳಿಗೆ 200-300 ರೂ. ಬೆಲೆಯ ಪೆಟ್ರೋಲ್ ಹಾಕಿಸಿಕೊಂಡು 2 ಸಾವಿರ ರೂ. ನೋಟುಕೊಟ್ಟು ಚಿಲ್ಲರೆ ಕೊಡುವಂತೆ ಹೇಳುತ್ತಿದ್ದಾರೆ. ಇದು ಬಂಕ್ ಸಿಬ್ಬಂದಿಗಳಿಗೆ ಕಿರಿ ಕಿರಿ ಎನಿಸಿದೆ. ಈ ಬಗ್ಗೆ ಸಿಬ್ಬಂದಿಗಳು ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿಗಳೂ ನಡೆಯುತ್ತಿವೆ.
ಬಂಕ್ ಸಿಬ್ಬಂದಿಗಳಿಗೆ ಚಿಲ್ಲರೆ ಕೊರತೆ ಒಂದು ಸಮಸ್ಯೆಯಾದರೆ, ಗ್ರಾಹಕರಿಂದ ಪಡೆದ ಹೆಚ್ಚು ಸಂಖ್ಯೆಯ ಎರಡು ಸಾವಿರ ರೂಪಾಯಿ ನೋಟುಗಳನ್ನು ಜಮಾ ಮಾಡಿದರೆ ಮುಂದೆ ತೊಂದರೆಯಾಗ ಬಹುದೆಂಬ ಭಯವೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಾವು 2 ಸಾವಿರ ರೂ.ಬೆಲೆಯ ನೋಟುಗಳನ್ನು ಪಡೆಯುತ್ತಿಲ್ಲ ಎಂದು ಬಂಕ್ ಸಿಬ್ಬಂದಿಯೊಬ್ಬರು ಹೇಳಿದರು.