ಸಿರಿಗೆರೆ, ಮೇ 10- ಮತದಾನ ಮಾಡದವರಿಗೆ ಬಿಪಿಎಲ್ ಕಾರ್ಡ್, ಪಿಂಚಣಿ, ಕಿಸನ್ ಸಮ್ಮಾನ್ ಇಂತಹ ಮೂಲಭೂತ ನಾಗರಿಕ ಸೌಕರ್ಯಗಳನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ವಿಶೇಷ ಕಾಯಿದೆ ಜಾರಿಗೆ ತರುವ ಅವಶ್ಯಕತೆ ಇದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಸಿರಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ-71 ರಲ್ಲಿ ಮತದಾನ ಮಾತನಾಡಿ, ರಾಜ್ಯದ ಜನರಿಗೆ ಮತದಾನ ದ ಬಗ್ಗೆ ಜಾಗೃತಿ ಹಾಗೂ ಪ್ರಜಾಪ್ರಭುತ್ವ ಬಗ್ಗೆ ಕಾಳಜಿ ಇರುವುದರಿಂದಲೇ ಮತದಾನ ಉತ್ತಮವಾಗಿ ನಡೆಯುತ್ತಿದೆ.
ಸಿರಿಗೆರೆಯಲ್ಲಿ ಪ್ರಜ್ಞಾವಂತ ನಾಗರಿಕರು ಶೇ. 100ರಷ್ಟು ಮತದಾನ ಮಾಡುವುದರ ಮೂಲಕ ಮಾದರಿ ಗ್ರಾಮವಾಗಿಸಬೇಕು ಎಂದರು. ಮತದಾನ ಮಾಡದ ನಾಗರಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಇದಕ್ಕೆ ಒಂದು ತಂತ್ರಜ್ಞಾನ ಹಾಗೂ ನಿಯಮ ಜಾರಿಯಾಗಬೇಕು ಎಂದರು.
224 ಕ್ಷೇತ್ರಗಳಲ್ಲಿ ಅಧಿಕ ಕ್ಷೇತ್ರಗಳನ್ನು ಗೆದ್ದ ಪಕ್ಷ ಸರ್ಕಾರ ರಚಿಸಬೇಕು. ಈ ರೀತಿಯ ಕಾನೂನು ಹಾಗೂ ನಿಯಮಗಳು ಬದಲಾಗಬೇಕು. ಇಲ್ಲವಾದರೆ ಬಹುಮತಕ್ಕೋಸ್ಕರ ಬೇರೆ ಪಕ್ಷಗಳಿಂದ ಶಾಸಕರನ್ನು ರೆಸಾರ್ಟ್ ರಾಜಕೀಯ ಹಾಗೂ ಇತರೆ ಆಮಿಷಗಳನ್ನು ಒಡ್ಡಿ ಕರೆತರುವ ರಾಜಕೀಯ ಬದಲಾದರೆ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಲು ಸಾಧ್ಯ.
ಈ ಸಂದರ್ಭದಲ್ಲಿ ಭರಮಸಾಗರ ಪಿಎಸ್‍ಐ ಎಲ್.ರವಿನಾಯ್ಕ್, ಬಿಎಲ್‍ಓಗಳು ಹಾಗೂ ಮತದಾರರು ಇದ್ದರು. ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದ 87 ವರ್ಷದ ವೃದ್ಧೆ ಕಂಡುಬಂದರು.