ಮೀಸಲಾತಿ : ಶಾ ವಿಶ್ಲೇಷಣೆ

ಮೀಸಲಾತಿ :  ಶಾ ವಿಶ್ಲೇಷಣೆ

ರಾಣೇಬೆನ್ನೂರಿನಲ್ಲಿ ಬೃಹತ್ ಶಾ ರೋಡ್‌ ಶೋ

ರಾಣೇಬೆನ್ನೂರು, ಮೇ 1 – ಕಾಂಗ್ರೆಸ್ ನವರು ಮುಸ್ಲಿಮರಿಗೆ ಶೇ. 4 ಮೀಸಲಾತಿ ಕೊಟ್ಟಿತ್ತು, ಬೊಮ್ಮಾಯಿ ಸರ್ಕಾರ ಲಿಂಗಾಯತ ರಿಗೆ, ಎಸ್ಸಿ, ಎಸ್ಟಿ ಅವರಿಗೆ ಮೀಸಲಾತಿ ಕೊಡಲು ಮುಸ್ಲಿಂಮರ ಮೀಸಲಾತಿ ರದ್ದು ಮಾಡಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ರಾಣೇಬೆನ್ನೂರಿನಲ್ಲಿ ರೋಡ್ ಶೋ ಮುಗಿದ ನಂತರ ಸಂಗಮ್ ಸರ್ಕಲ್ ನಲ್ಲಿ ಮಾತನಾಡಿ ಬಿಜೆಪಿ ಅಭ್ಯರ್ಥಿಗೆ ಮತ ಯಾಚಿಸಿದರು.

ನಾವು ಲಿಂಗಾಯತರು ಹಾಗೂ ಎಸ್ಸಿ-ಎಸ್ಟಿಗೆ ಮೀಸಲಾತಿ ಕೊಡಬಾರದೇ? ಎಂದು ನೆರೆದವರನ್ನು  ಪ್ರಶ್ನಿಸಿದ ಶಾ, 24 ರಲ್ಲಿ ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡಲು ಈಗ ಅರುಣಕುಮಾರ, ಮುಂದೆ ಲೋಕಸಭೆ ಚುನಾವಣೆಯಲ್ಲಿ ಶಿವಕುಮಾರ ಅವರನ್ನು ಆರಿಸಿ ತರಬೇಕು. ಡಬಲ್ ಎಂಜಿನ್ ಸರ್ಕಾರಗಳಿಂದ ದೇಶ ಅಭಿವೃದ್ಧಿ ಕಾಣಲಿದೆ ಎಂದು  ಹೇಳಿದರು. ಪಕ್ಷದ ವಿಶೇಷ ವಾಹನದಲ್ಲಿ  ಅಭ್ಯರ್ಥಿ ಅರುಣಕುಮಾರ ಪೂಜಾರ, ಸಂಸದ ಶಿವಕುಮಾರ ಉದಾಸಿ ಜೊತೆ ಗೂಡಿ  ಬಸ್ ಸ್ಟ್ಯಾಂಡ್ ನಿಂದ ಸಂಗಮ್ ಸರ್ಕಲ್ ವರೆಗೆ ನಡೆದ ಮೈಲುದ್ದದ ರೋಡ್ ಶೋ ನಲ್ಲಿ  ಅಗಣಿತ ಜನ ಸಾಗರವೇ ನೆರೆದಿತ್ತು. ಇದೊಂದು ಜನಮಾನಸದಲ್ಲಿ ಉಳಿಯುವ ಅಭೂತ ಪೂರ್ವ ಮೆರವಣಿಗೆಯಂತಿತ್ತು. ಭಾರತ ಮಾತಾಕಿ ಜೈ , ಮೋದಿಗೆ ಜೈ ಎಂಬ ಜೈಕಾರಗಳು ಮಾರ್ದನಿಗೊಳ್ಳುತ್ತಿದ್ದವು.

ಮೈಕ್ ಎಸೆದ ಶಾ…

ರಸ್ತೆ ಉದ್ದಕ್ಕೂ ಕುಣಿದು ಕುಪ್ಪಳಿಸುತ್ತಿದ್ದ ಜನರ ಮೇಲೆ ಗುಲಾಬಿ ಮತ್ತಿತರೆ ಹೂಗಳನ್ನು ಎಸೆಯುತ್ತಾ ಅತ್ಯಂತ ಹರ್ಷ ಚಿತ್ತರಾಗಿದ್ದ ಅಮಿತ್ ಶಾ ಅವರು ಸಂಗಮ್ ಸರ್ಕಲ್ ನಲ್ಲಿ ಮಾತನಾಡಲು ಮೈಕ್ ಹಿಡಿಯುತ್ತಲೇ ಅದು ಕಿರಿಕಿರಿಗುಟ್ಟಿತು. ಅದನ್ನ ಬದಲಾಯಿಸಿ ಮತ್ತೊಂದು ಕೊಟ್ಟರು. ಅದೂ  ಸಹ ಕಿರಿಗುಟ್ಟಿದ್ದರಿಂದ ಶಾ ಸಂತಸಕ್ಕೆ ತಣ್ಣೀರ ಎರಚಿದಂತಾಗಿದ್ದು ಸಿಟ್ಟಿನಿಂದ ಕೈಯ್ಯಲ್ಲಿದ್ದ ಮೈಕನ್ನು ಜೋರಾಗಿ ಎಸೆದ ಘಟನೆ ನಡೆಯಿತು.

error: Content is protected !!