ಬೆಂಗಳೂರು ಸಿಟಿ, ಗಂಗೇನಹಳ್ಳಿ, ಗಂಗಾನಗರ ಬಡಾವಣೆ ವಾಸಿ ಕೆ.ಆರ್. ಶಿವಮೂರ್ತಿ ಅವರ ಧರ್ಮಪತ್ನಿ ಕೆ.ಎಸ್. ಬಸಮ್ಮ ಇವರು ದಿನಾಂಕ : 02.03.2025ರ ಭಾನುವಾರ ಮಧ್ಯಾಹ್ನ 2.45ಕ್ಕೆ ನಿಧನರಾದರು. ಮೃತರಿಗೆ 72 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಹಗೇದಿಬ್ಬ ಸರ್ಕಲ್ ಬಳಿಯ ಕುಂಬಾರ ಪೇಟೆಯ ಮೃತರ ನಿವಾಸದಲ್ಲಿ 11 ಗಂಟೆಯವರೆಗೆ ಇರಿಸಲಾಗುವುದು. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 03.03.2025ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆ ಗಾಂಧಿನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಅಂಗಡಿ ರುದ್ರಮ್ಮ
