ಜಗಳೂರು ತಾಲ್ಲೂಕು ಬಸವನ ಕೋಟೆ ಗ್ರಾಮದ ವಾಸಿ ವೀರಶೈವ ಸಮಾಜದ ಮುಖಂಡರು, ಜಗಳೂರು ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಿ.ಸಿ. ಮಲ್ಲಿಕಾರ್ಜುನಪ್ಪ ಅವರು ದಿನಾಂಕ : 05.02.2025 ರ ಬುಧವಾರ ಸಂಜೆ 6 ಗಂಟೆಗೆ ನಿಧನರಾದರು. ಮೃತರಿಗೆ 86 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 06.02.2025ರ ಗುರುವಾರ ಮಧ್ಯಾಹ್ನ 1 ಗಂಟೆಗೆ ಬಸವನಕೋಟೆ ಗ್ರಾಮದ ಮೃತರ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಬಿ.ಸಿ. ಮಲ್ಲಿಕಾರ್ಜುನಪ್ಪ
