ದಾವಣಗೆರೆ ತಾಲ್ಲೂಕು ನಲ್ಕುಂದ ಗ್ರಾಮದ ವಾಸಿ ಮುರುಡಬಸಪ್ಪರ ದಿ. ಈಶ್ವರಪ್ಪನವರ ಧರ್ಮಪತ್ನಿ ಶ್ರೀಮತಿ ಮುರುಡಬಸಪ್ಪರ ವನಜಾಕ್ಷಮ್ಮ ಇವರು ದಿನಾಂಕ 05.02.2025ರ ಬುಧವಾರ ಸಂಜೆ 3.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 65 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 6.02.2025ರ ಗುರುವಾರ ಮಧ್ಯಾಹ್ನ 12.30ಕ್ಕೆ ನಲ್ಕುಂದ ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮಂಜುಳ ಎನ್.
