ತುಮಕೂರಿನ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಬಣಕಾರ್ ಅವರು ದಿನಾಂಕ 29.12.2024ರ ಭಾನುವಾರ ತಡರಾತ್ರಿ 1.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಡಾ. ಮಮತಾ, ದಾವಣಗೆರೆ ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಎಂ.ಬಿ. ನಾಗೇಂದ್ರಪ್ಪ ಅವರ ಧರ್ಮಪತ್ನಿ ಮತ್ತು ಜಜಮು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ರವೀಂದ್ರ ಬಣಕಾರ್ ಅವರ ಸಹೋದರಿ.ಮೃತರಿಗೆ 52 ವರ್ಷ ವಯಸ್ಸಾಗಿತ್ತು. ಪತಿ, ಇಬ್ಬರು ಪುತ್ರಿಯರಾದ ಡಾ. ಶ್ರಾವಣಿ ಮತ್ತು ಡಾ. ಸೃಷ್ಟಿಕಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಮನೆ ಸಂಖ್ಯೆ 3339, 15ನೇ ತಿರುವು, ಬಾಪೂಜಿ ಶಾಲೆ ಹಿಂಭಾಗ, ಎಂ.ಸಿ.ಸಿ. `ಬಿ’ ಬ್ಲಾಕ್ ದಾವಣಗೆರೆ ಇಲ್ಲಿರುವ ಮೃತರ ನಿವಾಸದಲ್ಲಿಡಲಾಗಿದೆ. ಮೃತರ ಅಂತ್ಯಕ್ರಿಯೆಯು ದಿನಾಂಕ 30.12.2024ರ ಸೋಮವಾರ ಸಂಜೆ 5ಕ್ಕೆ ಚಳ್ಳಕೆರೆ ತಾಲ್ಲೂಕಿನ ಮನ್ನೆಕೋಟೆ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬವರ್ಗದವರು ತಿಳಿಸಿದ್ದಾರೆ.
February 8, 2025