ದಾವಣಗೆರೆ ಸಿಟಿ ಆನೆಕೊಂಡದ ವಾಸಿ ಪ್ರಗತಿಪರ ರೈತರು, ದಾವಣಗೆರೆ ತಾಲ್ಲೂಕು ಸೊಸೈಟಿ ಅಧ್ಯಕ್ಷರು, ಆನೆಕೊಂಡ ವ್ಯವಸಾಯಗಾರ ಸಂಘದ ಮಾಜಿ ಅಧ್ಯಕ್ಷರು ರೈತರ ಫಸಲು ಮಾರಾಟಗಾರರ ಸಂಘದ ಮಾಜಿ ನಿರ್ದೇಶಕರು, ಕಬ್ಬು ಬೆಳೆಗಾರರ ಹೋರಾಟಗಾರರ ಸಂಘದ ಕೋಶಾಧ್ಯಕ್ಷರು, ಆನೆಕೊಂಡದ ಗ್ರಾಮ ಪಂಚಾಯತಿ ಮಾಜಿ ಛೇರ್ಮನ್ ದೇವರಾಜ ಅರಸು ಸಂಸ್ಥೆಯ ಶ್ರೀಮತಿ ನೀಲಮ್ಮ ಬೇತೂರು ಬಸಪ್ಪ ಪ್ರೌಢಶಾಲೆ ಮತ್ತು ಶ್ರೀ ಬೇತೂರು ಚನ್ನಬಸಪ್ಪ ಸಿದ್ಧಬಸಪ್ಪ ಪ್ರಾಥಮಿಕ ಶಾಲೆ ನಿವೇಶನ ದಾನಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದರು. ಶ್ರೀ ಬೇತೂರು ಸಿದ್ದಬಸಪ್ಪನವರು ದಿನಾಂಕ 10.09.2024ರ ಮಂಗಳವಾರ ಬೆಳಿಗ್ಗೆ 3.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 94 ವರ್ಷ ವಯಸ್ಸಾಗಿತ್ತು. ಪತ್ನಿ, ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 10.9.2024ರ ಮಂಗಳವಾರ ಸಂಜೆ 5 ಗಂಟೆಗೆ ಮೃತರ ಸ್ವಂತ ತೋಟದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 4, 2024