ದಾವಣಗೆರೆ ವಿನೋಬನಗರದ ನಿವಾಸಿ, ಬಿರ್ಲಾ ಕಂಪನಿಯ ನಿವೃತ್ತ ನೌಕರರಾದ ಶ್ರೀ ತುಂಬಿಗೆರೆ ರುದ್ರಪ್ಪ ಇವರು ದಿನಾಂಕ 8.9.2024ರ ರಾತ್ರಿ 10 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ಮೃತರಿಗೆ ಸುಮಾರು 74 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಐವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತ ರುದ್ರಪ್ಪನವರು `ದಾವಣಗೆರೆ ಕನ್ನಡಿಗ’ ಸಂಪಾದಕರಾದ ರವಿ ಅವರ ಮಾವ. ಮೃತರ ಅಂತ್ಯಕ್ರಿಯೆಯಯನ್ನು ದಿನಾಂಕ 9.09.2024ರ ಸೋಮವಾರ ಮಧ್ಯಾಹ್ನ 2ಕ್ಕೆ ದಾವಣಗೆರೆ ತಾಲ್ಲೂಕಿನ ತುಂಬಿಗೆರೆ ಗ್ರಾಮದಲ್ಲಿರುವ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024