ದಾವಣಗೆರೆ ಸಿಟಿ ಡೋರ್ ನಂ. 230, 3ನೇ ಕ್ರಾಸ್ `ಎ’ ಬ್ಲಾಕ್, ದೇವರಾಜ ಅರಸು ಬಡಾವಣೆ ವಾಸಿ, ದಿ. ಲಲಿತಮ್ಮ ದಿ. ಪಂಚಾಕ್ಷರಪ್ಪ ಶೀಲವಂತ ಇವರ ಮಗ ಎಂ.ಎಸ್. ನಾಗರಾಜ್ ಶೀಲವಂತ್ (66) ಇವರು ದಿನಾಂಕ 21.08.2024ರ ಬುಧವಾರ ಬೆಳಿಗ್ಗೆ 8.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥೀವ ಶರೀರವನ್ನು ದಿನಾಂಕ 22.8.2024ರ ಗುರುವಾರ ಬೆಳಿಗ್ಗೆ 10 ಗಂಟೆಯವರೆಗೆ ದೇವರಾಜ ಅರಸು ಬಡಾವಣೆಯ ಮೃತರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ನಂತರ ನಗರದ ಜೆಜೆಎಂ ಮೆಡಿಕಲ್ ಕಾಲೇಜ್ಗೆ ಹಸ್ತಾಂತರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024