ಹರಿಹರ ತಾಲ್ಲೂಕಿನ ಜಿ. ಬೇವಿನಹಳ್ಳಿ ಗ್ರಾಮದ ವಾಸಿ ಜಿಗಳಿ ಗ್ರಾ ಪಂ ಮಾಜಿ ಅಧ್ಯಕ್ಷರೂ, ಮಲೇಬೆನ್ನೂರಿನ ನಂದಿ ಬ್ಯಾಂಕಿನ ಮಾಜಿ ನಿರ್ದೇಶಕರೂ, ಪುಷ್ಪಗಿರಿ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಾಪೋಷಕರೂ ಆದ ಪಾಲ್ದಾರ್ ಗೌಡ್ರ ಬಿ. ಕೆ. ಮಹೇಶ್ವರಪ್ಪ (62 ವರ್ಷ) ಇವರು ದಿನಾಂಕ : 21.08.2024 ರ ಬುಧವಾರ ಮಧ್ಯಾಹ್ನ 12.30 ಕ್ಕೆ ಅನಾರೋಗ್ಯದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಸಹೋದರ ಬಿ. ಕೆ. ಗದಿಗೆಪ್ಪ ಮತ್ತು ಪತ್ನಿ, ಐವರು ಪುತ್ರಿಯರು, ಓರ್ವ ಪುತ್ರ, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ :22.08.2024ರ ಗುರುವಾರ ಬೆಳಗ್ಗೆ 12 ಗಂಟೆಗೆ ಜಿ. ಬೇವಿನಹಳ್ಳಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024