ದಾವಣಗೆರೆ ನಗರದ ಹೆಸರಾಂತ ಆಟೋಮೊಬೈಲ್ ಉದ್ಯಮಿ ಹಾಗೂ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ವೇ.ಶ್ರೀ ಎನ್.ಜೆ. ಗುರುಸಿದ್ದಯ್ಯನವರು (80)ದಿನಾಂಕ 21.08.2024ರ ಬುಧವಾರ ಮಧ್ಯಾಹ್ನ 1.55 ಗಂಟೆಗೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು, ಸಹೋದರ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 22.08.2024ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಪೂನಾ-ಬೆಂಗಳೂರು ರಸ್ತೆಯಲ್ಲಿರುವ ಶಂಕರ ವಿಹಾರ ಬಡಾವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಮೋಟಾರ್ಸ್ ಆವರಣದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ವೇ.ಶ್ರೀ ಎನ್.ಜೆ. ಗುರುಸಿದ್ದಯ್ಯ
