ಪಾಂಡುರಂಗ ಛೇಂಬರ್ಸ್, ಬಿ.ಟಿ. ಪೆಟ್ರೋಲ್ ಬಂಕ್ ಹತ್ತಿರ ದಾವಣಗೆರೆ ವಾಸಿಗಳಾದ ಅಂಬರ್ಕರ್ ವೈ. ವಿರೂಪಣ್ಣನವರು (78ವರ್ಷ) ಹಿರಿಯ ಹಾಗೂ ಖ್ಯಾತ ಲೆಕ್ಕ ಪರಿಶೋಧಕರು ಮತ್ತು ದಾವಣಗೆರೆ ಸ್ಮಾರ್ಟ್ ಸಿಟಿ ಪ್ರೈವೇಟ್ ಲಿಮಿಟೆಡ್ನ ಪ್ರಥಮ ಲೆಕ್ಕ ಪರಿಶೋಧಕರು. ಇವರು, ದಿನಾಂಕ : 21.08.2024ರ ಬೆಳಗಿನ ಜಾವ 4.00 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ದಿನಾಂಕ 22-8-2024ರ ಗುರುವಾರ ಬೆಳಿಗ್ಗೆ 11.30ಕ್ಕೆ ಪಿ.ಬಿ. ರೋಡ್ನಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು. ಅಂತಿಮ ದರ್ಶನಕ್ಕಾಗಿ ಪಾರ್ಥೀವ ಶರೀರವನ್ನು : 3352/A17/1, ಅಂಬರ್ ಕರ್ ಅಬೋಡ್, 7ನೇ ಕ್ರಾಸ್, 7ನೇ ಮೇನ್, ಸಾಯಿ ಅನ್ನಪೂರ್ಣ ಲೇಡೀಸ್ ಹಾಸ್ಟೆಲ್ ಪಕ್ಕ, ಶಾಮನೂರು ರೋಡ್, ದಾವಣಗೆರೆ ಇಲ್ಲಿ ಇರಿಸಲಾಗುವುದು. ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024